Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

30 ಸಾವಿರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

30 ಸಾವಿರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ
ಬೆಂಗಳೂರು , ಬುಧವಾರ, 10 ನವೆಂಬರ್ 2021 (11:28 IST)
'ಪವರ್ ಸ್ಟಾರ್' ಪುನೀತ್ ನಿಧನದ ಹಿನ್ನೆಲೆಯಲ್ಲಿ ಡಾ. ರಾಜ್ಕುಮಾರ್ ಕುಟುಂಬವು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಮಂಗಳವಾರ (ನ.9) ಏರ್ಪಡಿಸಿತ್ತು.
ಅಪ್ಪು ಮೇಲಿನ ಅಭಿಮಾನದಿಂದ ರಾಜ್ಯ, ಹೊರರಾಜ್ಯಗಳಿಂದ ಅಭಿಮಾನಿಗಳು ಆಗಮಿಸಿದ್ದರು. ಆರಂಭದಲ್ಲಿ ಸುಮಾರು 20 ಸಾವಿರ ಜನರು ಆಗಮಿಸುವ ನಿರೀಕ್ಷೆ ಇತ್ತು. ಅಂತಿಮವಾಗಿ ಸುಮಾರು 30 ಸಾವಿರ ಜನರಿಗೆ ಅನ್ನ ಸಂತರ್ಪಣೆ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.
ಊಟ ಬಡಿಸಿದ ಶಿವಣ್ಣ, ರಾಘಣ್ಣ, ಅಶ್ವಿನಿ
ತ್ರಿಪುರ ವಾಸಿನಿ ಮೈದಾನದಲ್ಲಿ ಸುಮಾರು 4 ಸಾವಿರ ಜನರು ಏಕಕಾಲಕ್ಕೆ ಊಟ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೊದಲಿಗೆ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರೇ ಮುಂದೆ ನಿಂತು ಕಣ್ಣೀರಿಡುತ್ತಲೇ ಅಭಿಮಾನಿಗಳಿಗೆ ಊಟ ಬಡಿಸಿದರು. ಅಪ್ಪು ಅವರು ಮಾಂಸಾಹಾರ ಪ್ರಿಯರಾಗಿದ್ದರಿಂದ ನಾನ್ ವೆಜ್ ಅಡುಗೆಯನ್ನೂ ಮಾಡಿಸಲಾಗಿತ್ತು. ವೆಜ್ಗಿಂತ ನಾನ್ ವೆಜ್ ಊಟ ಮಾಡಿದವರ ಸಂಖ್ಯೆಯೇ ಜಾಸ್ತಿ ಇತ್ತು. ನಾನ್ ವೆಜ್ ಅಡುಗೆಗಾಗಿ ಸುಮಾರು 4500 ಕೆ.ಜಿ. ಚಿಕನ್ ತರಿಸಲಾಗಿತ್ತು. ಹೆಚ್ಚುವರಿಯಾಗಿ ಮತ್ತೆ 500 ಕೆ.ಜಿ. ಚಿಕನ್ ತರಿಸಲಾಗಿತ್ತು.
ಅನ್ನ ಸಂತರ್ಪಣೆ ಕಾರ್ಯಕ್ಕೆ ಸುಮಾರು 1 ಸಾವಿರ ಬಾಣಸಿಗರು ಕೆಲಸ ಮಾಡಿದ್ದಾರೆ. ಅಡುಗೆಗೆ 4 ಸಾವಿರ ಕೆ.ಜಿ. ಸೋನಾ ಮಸೂರಿ ಅಕ್ಕಿ, 750 ಲೀಟರ್ ಎಣ್ಣೆ, ಕೆಜಿಗಟ್ಟಲೇ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಪುದೀನಾ, ಕೊತ್ತಂಬರಿ ಸೊಪ್ಪು ಕಟ್ಟು, ರಾಶಿ ರಾಶಿ ದಿನಸಿಗಳನ್ನು ರಾಜ್ ಕುಟುಂಬವು ಪೂರೈಸಿತ್ತು. ಆಲೂ ಕಬಾಬ್, ಬೇಬಿ ಕಾರ್ನ್, ಘೀ ರೈಸ್-ಕುರ್ಮ, ಅನ್ನ-ರಸಂ, ಅಕ್ಕಿ ಪಾಯಸ, ಮಸಾಲೆ ವಡೆ ಇತ್ತು. ಇನ್ನು ನಾನ್ ವೆಜ್ ಆಹಾರಪ್ರಿಯರಿಗೆ ಮೊಟ್ಟೆ, ಚಿಕನ್ ಕಬಾಬ್, ಚಿಕನ್ ಚಾಪ್ಸ್, ಘೀ ರೈಸ್, ಅನ್ನ-ರಸಂ ಅಡುಗೆ ಮಾಡಿಸಲಾಗಿತ್ತು.

 

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಸಖತ್ ಸುದ್ದಿ