Webdunia - Bharat's app for daily news and videos

Install App

ಜಾಂಡೀಸಿಂದ ನರಳುತ್ತಿದ್ದ ಮೋಹನ್ ಛಾಬ್ರಿಯಾ ಇನ್ನಿಲ್ಲ

Webdunia
ಸೋಮವಾರ, 12 ಡಿಸೆಂಬರ್ 2016 (08:09 IST)
ಕನ್ನಡ ಚಲನಚಿತ್ರ ನಿರ್ಮಾಪಕ, ಆನಂದ್ ಆಡಿಯೋ ಕಂಪನಿ ಮಾಲೀಕ ಮೋಹನ್ ಛಾಬ್ರಿಯಾ (52) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಅವರು ಜಾಂಡೀಸ್‌ನಿಂದ ಬಳಲುತ್ತಿದ್ದು ವಿಶ್ರಾಂತಿ ಪಡೆಯುತ್ತಿದ್ದರು. 
 
ಲಿವರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದ ಕಾರಣ ಅವರು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದರು. ಲಿವರ್ ಕಸಿ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಬೇಕಿತ್ತು. ಆದರೆ ಶಸ್ತ್ರಚಿಕಿತ್ಸೆಗೂ  ಮುನ್ನವೇ ಅವರು ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.
 
ಎರಡು ದಶಕಗಳ ಹಿಂದೆ ಆನಂದ್ ಆಡಿಯೋ ಕಂಪನಿ ಆರಂಭಿಸಿದ ಛಾಬ್ರಿಯಾ ಕನ್ನಡದ ಅತಿದೊಡ್ಡ ಮ್ಯೂಸಿಕ್ ಕಂಪನಿಯಾಗಿ ಅದನ್ನು ಬೆಳೆಸುವಲ್ಲಿ ಅವರ ಶ್ರಮ ಎದ್ದುಕಾಣುತ್ತದೆ. ಶರಣ್ ನಾಯಕ ನಟನಾಗಿದ್ದ ವಿಕ್ಟರಿ ಚಿತ್ರವನ್ನು ನಿರ್ಮಿಸಿದ್ದಾರೆ. 
 
ಚಿತ್ರೋದ್ಯಮದಲ್ಲಿ ಛಾಬ್ರಿಯಾ ಅವರಿಗೆ ಒಳ್ಳೆಯ ಹೆಸರಿತ್ತು. ಯಾವುದೇ ವಿವಾದಗಳಿಲ್ಲದ ವಿವಾದಾತೀಯ ವ್ಯಕ್ತತ್ವ ಅವರದಾಗಿತ್ತು. ಹಾಗಾಗಿ ಅವರಿಗೆ ಸಹಜವಾಗಿಯೇ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಗೆಳೆಯರಿದ್ದರು. ಅವರ ಪುತ್ರ ಆನಂದ್‌ಗೆ ಕಳೆದ ವರ್ಷವಷ್ಟೇ ಮದುವೆ ಮಾಡಿದ್ದರು. ಛಾಬ್ರಿಯಾ ತಮ್ಮ ಶ್ಯಾಮ್ ಛಾಬ್ರಿಯಾ ಸಹ ಆಡಿಯೋ ಉದ್ಯಮದಲ್ಲಿ ಅಣ್ಣನಿಗೆ ಸಹಾಯಕರಾಗಿದ್ದರು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments