ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಜತೆಯಾಗಿ ಅಭಿನಯಿಸುತ್ತಿರುವ ’ದ ವಿಲನ್’ ಚಿತ್ರಕ್ಕೆ ಬೊಂಬಾಟ್ ಬೆಡಗಿ ಸಿಕ್ಕಿದ್ದಾರೆ. ಪ್ರೇಮ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಎಮಿ ಜಾಕ್ಸನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುತ್ತಿವೆ ಗಾಂಧಿನಗರ ಮೂಲಗಳು.
ಈ ಹಿಂದೆ ಮಿಲ್ಕಿ ಬ್ಯೂಟಿ ತಮನ್ನಾ ಹೆಸರು ಕೇಳಿಬಂದಿತ್ತು. ಒಂದಷ್ಟು ಬಾಲಿವುಡ್ ನಟಿಯರ ಹೆಸರು ಹರಿದಾಡಿತ್ತು. ಈಗ ಎಮಿ ಜಾಕ್ಸನ್ ನಾಯಕಿ ಎನ್ನಲಾಗಿದೆ. ಸದ್ಯಕ್ಕೆ ರಜನಿಕಾಂತ್ ಅಭಿನಯದ ಶಂಕರ್ ನಿರ್ದೇಶನದ 2.0 ಚಿತ್ರದಲ್ಲಿ ಎಮಿ ಜಾಕ್ಸನ್ ಅಭಿನಯಿಸುತ್ತಿದ್ದು, ಅದಾದ ಕೂಡಲೆ ಕನ್ನಡಕ್ಕೆ ಕರೆತರಲಿದ್ದಾರಂತೆ ಪ್ರೇಮ್.
ಪ್ರೇಮ್ ತಮ್ಮ ಹಿಂದಿನ ಚಿತ್ರಗಳಿಗೆ ಮಲ್ಲಿಕಾ ಶೆರಾವತ್, ಸನ್ನಿ ಲಿಯೋನ್ರನ್ನೇ ಕರೆತಂದಿದ್ದರು. ಇನ್ನು ಎಮಿ ಜಾಕ್ಸನ್ ಕರೆತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದೆ ಗಾಂಧಿನನಗರ ಪಡಸಾಲೆ. ಎಮಿ ಆಗಮನವನ್ನು ಅಧಿಕೃತವಾಗಿ ಘೋಷಿಸುವುದೊಂದು ಬಾಕಿ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.