Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟಿ ಅಮಲಾ ಪೌಲ್ ವಿಚ್ಛೇದನ ಹಿಂದೆ ಧನುಷ್?

ನಟಿ ಅಮಲಾ ಪೌಲ್ ವಿಚ್ಛೇದನ ಹಿಂದೆ ಧನುಷ್?
Chennai , ಸೋಮವಾರ, 2 ಜನವರಿ 2017 (14:15 IST)
ಬಹಳ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿವಾಹ ಬಂಧನಕ್ಕೆ ಒಳಗಾದ ನಟಿ ಅಮಲಾ ಪೌಲ್. ಆಮೇಲೆ ಒಂದು ವರ್ಷ ತುಂಬುದರೊಳಗೆ ವಿಚ್ಛೇದನ ಪಡೆದು ಸುದ್ದಿಯಾದರು. ಗಂಡನಿದ ಅಮಲಾ ದೂರವಾಗಲು ರಜನಿಕಾಂತ್ ಅಳಿಮಯ್ಯ ಧನುಷ್ ಕಾರಣ ಎಂಬ ಸುದ್ದಿ ಹಬ್ಬಿದೆ. 
 
ಅಮಲಾ ಮತ್ತು ಧನುಷ್ ನಡುವೆ ಕಣ್ಣಾಮುಚ್ಚೆ ಕಾಡೆಗೂಡೆ ನಡೆಯುತ್ತಿದೆ ಎಂಬ ವದಂತಿ ಇದೆ. ವಿವಾಹಕ್ಕೂ ಮೊದಲು, ಆನಂತರ ಒಂದಾದ ಮೇಲೊಂದರಂತೆ ಧನುಷ್  ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದೇ ಈ ವದಂತಿಗೆ ಕಾರಣ. 
 
ಈಗ ಸೆಟ್ಟೇರಿರುತ್ತಿರುವ ವಿಐಪಿ 2 ಚಿತ್ರಕ್ಕೆ ಅಮಲಾರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಬೇಡಿ ಎಂದು ವಿನಂತಿಸಿಕೊಂಡಿದೆಯಂತೆ ಅವರ ಮಾಜಿ ಪತಿಯ ಕುಟುಂಬಿಕರು. ಆದರೂ ಅವರ ಮಾತಿಗೆ ಸೊಪ್ಪು ಹಾಕದೆ ಅಮಲಾರನ್ನೇ ಆಯ್ಕೆ ಮಾಡಿದ್ದಾರೆ ಧನುಷ್. ಈ ಹಿನ್ನೆಲೆಯಲ್ಲಿ ಸಾಕಷ್ಟು ಗುಸುಗುಸು ಮಾತುಗಳು ಕೇಳಿಬರುತ್ತಿವೆ. 
 
ಈ ಬಗ್ಗೆ ಮಾತನಾಡಿರುವ ಅಮಲಾ, ಒಬ್ಬ ವ್ಯಕ್ತಿಯ ಬಗ್ಗೆ ಇಷ್ಟು ಕೆಟ್ಟಪ್ರಚಾರ ಮಾಡುವುದು ನೀಚತನದ ಪರಮಾವಧಿ ಎಂದಿದ್ದಾರೆ. ಧನುಷ್ ನನ್ನ ಹಿತೈಶಿ. ಸಂಸಾರವನ್ನು ಉಳಿಸಲು ಸಾಕಷ್ಟು ಪ್ರಯತ್ನಪಟ್ಟರು. ಆ ರೀತಿಯ ವ್ಯಕ್ತಿಯೊಂದಿಗೆ ನನ್ನ ಹೆಸರು ಥಳುಕು ಹಾಕಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಲೂಫಿಲಂನಲ್ಲಿ ಅಭಿನಯಿಸಕ್ಕೂ ಸಿದ್ಧಳಾಗಿದ್ದ ತಾರೆ