Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

’ಹೆಬ್ಬುಲಿ’ ನಾಯಕಿ ಅಮಲಾ ಪೌಲ್‌ಗೆ ವಿಚ್ಛೇದನ ಮಂಜೂರು

’ಹೆಬ್ಬುಲಿ’ ನಾಯಕಿ ಅಮಲಾ ಪೌಲ್‌ಗೆ ವಿಚ್ಛೇದನ ಮಂಜೂರು
Chennai , ಗುರುವಾರ, 23 ಫೆಬ್ರವರಿ 2017 (09:19 IST)
ಸಿನಿಮಾ ತಾರೆ, ಇಂದು ತೆರೆಕಂಡಿರುವ (ಫೆ.23) ಹೆಬ್ಬುಲಿ ಚಿತ್ರದ ನಾಯಕಿ ಅಮಲಾ ಪೌಲ್‌ ಮತ್ತವರ ಪತಿ ವಿಜಯನ್‌ಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ. ನ್ಯಾಯಾಲಯದ ಅನುಮತಿ ಮೇರೆಗೆ ಕಳೆದ ಆರು ತಿಂಗಳಿಂದ ಇವರಿಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಇವರಿಗೆ ವಿಚ್ಛೇದನ ಮಂಜೂರು ಮಾಡಲಾಗಿದೆ.
 
2014ರ ಜೂನ್ 12ರಂದು ಹಿರಿಯರ ಸಮ್ಮುಖದಲ್ಲಿ ಈ ಜೋಡಿ ಒಂದಾಗಿದ್ದು ಗೊತ್ತೇ ಇದೆ. ಆದರೆ ಮದುವೆ ಬಳಿಕ ಸಿನಿಮಾಗಳಿಂದ ದೂರ ಇರಬೇಕು ಎಂಬ ಅತ್ತೆ ಮನೆಯವರ ನಿಬಂಧನೆಯನ್ನು ಅಮಲಾ ಪಾಲಿಸದಿದ್ದ ಕಾರಣ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. 
 
ಸಂಸಾರದಲ್ಲಿ ಬಿರುಕು ಉಂಟಾದ ಕಾರಣ ಬಹಳ ದಿನ ಈ ಜೋಡಿ ಒಟ್ಟಿಗೆ ಇರಲು ಸಾಧ್ಯವಾಗಲಿಲ್ಲ. ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಬಳಿಕ ದೂರ ಸರಿದ ಇಬ್ಬರೂ ತಮ್ಮತಮ್ಮ ಕೆಲಸಗಳಲ್ಲಿ ತೊಡಗಿಕೊಂಡರು. ಅಮಲಾ ಪೌಲ್ ಕೈಯಲ್ಲಿ ಏನಿಲ್ಲವೆಂದರೂ ಅರ್ಧ ಡಜನ್ ಚಿತ್ರಗಳಿವೆ. ವಿಜಯ್ ಸಹ ಎರಡು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಏಂಜಲಿನಾ ಜೋಲಿ ಏನ್ ತಿಂತಿದ್ದಾರೆ ಅಂತ ನೋಡಿ!