ಹೈದರಾಬಾದ್ : ಅಲ್ಲುಅರವಿಂದ್ ಅವರು ನಿರ್ಮಿಸಿದ ತೆಲುಗು ಪ್ರಾದೇಶಿಕ ಒಟಿಟಿ ಪ್ಲಾಟ್ ಫಾರ್ಮ್ ದೊಡ್ಡ ಯಶಸ್ಸನ್ನು ಕಂಡಿದ್ದು, ತೆಲುಗು ಪ್ರೇಕ್ಷಕರಿಗೆ ಅಗತ್ಯವಾದ ಮನರಂಜನೆಯನ್ನು ನೀಡಿದೆ. ಇತ್ತೀಚೆಗೆ ಇದರ ಮೊದಲ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಅಲ್ಲು ಅರವಿಂದ್ ಹಾಗೂ ಸಂಸ್ಥಾಪಕರಲ್ಲೊ ಒಬ್ಬರಾದ ನಿರ್ದೇಶಕ ಜುಪಲ್ಲಿ ರಾಮು ರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಕೇವಲ ಒಂದು ವರ್ಷದಲ್ಲಿ ಆಹಾ ಬಿಲಿಯನ್ ಸೆಕೆಂಡು ಸ್ಟ್ರೀಮಿಂಗ್, 85 ಲಕ್ಷ ಡೌನ್ ಲೋಡ್ ಆಗಿದ್ದು, ಪ್ರಾದೇಶಿಕ ಒಟಿಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. 2022ರಲ್ಲಿ ಈ ಗುರಿಯನ್ನು ನಿರೀಕ್ಷಿಸಿದ ಅಲ್ಲು ಅರವಿಂದ್ ಅವರು ಒಂದು ವರ್ಷದಲ್ಲಿ ಆಹಾದ ಸಾಧನೆ ಕಂಡು ಸಂತಸಗೊಂಡಿದ್ದಾರೆ.