ಹೈದರಾಬಾದ್: ತೆಲುಗು ಸೆನ್ಸೇಷನಲ್ ಸ್ಟಾರ್ ಅಲ್ಲು ಅರ್ಜುನ್ ಎರಡನೇ ಬಾರಿ ಅಪ್ಪನಾದ ಖುಷಿಯಲ್ಲಿದ್ದಾರೆ. ಅವರ ಪತ್ನಿ ಸ್ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈಗಾಗಲೇ ಒಬ್ಬ ಪುತ್ರನನ್ನು ಹೊಂದಿರುವ ಅಲ್ಲು ಈಗ ತಮ್ಮ ಕುಟುಂಬ ಸಂಪೂರ್ಣವಾದ ಖುಷಿಯಲ್ಲಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು ಒಬ್ಬ ಮಗ, ಇನ್ನೊಬ್ಬ ಮಗಳು.. ಖುಷಿಯಾಗಿದ್ದೇನೆ. ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.
2011 ರಲ್ಲಿ ಅಲ್ಲು ಮತ್ತು ಸ್ನೇಹಾ ಹೈದರಾಬಾದ್ ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಈಗಾಗಲೇ ಎರಡು ವರ್ಷದ ಗಂಡು ಮಗುವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ