ಹೈದರಾಬಾದ್: ತ್ರಿಬಲ್ ಆರ್ ಸಿನಿಮಾ ಬಳಿಕ ಮತ್ತೊಮ್ಮೆ ಜ್ಯೂ. ಎನ್ ಟಿಆರ್ ಜೊತೆ ಅಲಿಯಾ ಬಟ್ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ.
ತ್ರಿಬಲ್ ಆರ್ ಸಿನಿಮಾ ಬಳಿಕ ಜೂ.ಎನ್ ಟಿಆರ್ ಅಭಿನಯಿಸಲಿರುವ ಕೊರಟಾಲ ಶಿವ ನಿರ್ದೇಶನದ ಹೊಸ ಸಿನಿಮಾಗೆ ಅಲಿಯಾ ನಾಯಕಿಯಾಗಿದ್ದಾರೆ. ಇದು ಅಲಿಯಾ ಪಾಲಿನ ಎರಡನೇ ತೆಲುಗು ಸಿನಿಮಾವಾಗಿದೆ.
ತ್ರಿಬಲ್ ಆರ್ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ದಕ್ಷಿಣ ಭಾರತದ ಸಿನಿಮಾ ಬಗ್ಗೆ ಅಲಿಯಾಗೆ ಒಲವು ಹೆಚ್ಚಾಗಿದೆ. ಇದೀಗ ಈ ಸಿನಿಮಾ ಕತೆ ಕೇಳಿ ಥ್ರಿಲ್ ಆಗಿರುವ ಅಲಿಯಾ ಮತ್ತೊಂದು ತೆಲುಗು ಸಿನಿಮಾಗೆ ಸಹಿ ಹಾಕುವ ನಿರ್ಧಾರ ಮಾಡಿದ್ದಾರಂತೆ.