ಬೆಂಗಳೂರು: ಹಿರಿಯ ನಟಿ ತಾರಾ ಮತ್ತೆ ಗರ್ಭಿಣಿಯಾಗಿದ್ದಾರಂತೆ! ಅವರ ಉಬ್ಬು ಹೊಟ್ಟೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ ತಾರಾ ಗರ್ಭಿಣಿಯಾಗಿರುವುದು ನಿಜ ಜೀವನದಲ್ಲಿ ಅಲ್ಲ. ಅವರು ಉಸಿರೇ ಉಸಿರೇ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಗರ್ಭಿಣಿಯ ಪಾತ್ರ ಮಾಡುತ್ತಿದ್ದಾರೆ.
ಆದರೆ ಪಕ್ಕಾ ಗರ್ಭಿಣಿಯಂತೇ ಉಬ್ಬ ಹೊಟ್ಟೆಯ ಜೊತೆಗೆ ಅವರ ಫೋಟೋಗಳು ನೋಡಿದ ಅಭಿಮಾನಿಗಳು ಅವರು ನಿಜವಾಗಿಯೂ ಎರಡನೆಯ ಬಾರಿಗೆ ಗರ್ಭಿಣಿಯಾಗಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.