ಮುಂಬೈ : ಬಾಲಿವುಡ್ ನಟ ವರುಣ್ ದವನ್ ತಮ್ಮ ಗೆಳತಿ ನತಾಶಾ ದಲಾಲ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ನಟಿ ಶ್ರದ್ಧಾ ಶ್ರೀನಾಥ್ ಅವರ ಪ್ರತಿಕ್ರಿಯೆ ವಿಭಿನ್ನವಾಗಿದ್ದು, ಅವರ ಕಾಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರುಣ್ ದವನ್ ಮತ್ತು ನತಾಶಾ ದಲಾಲ್ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ ಶ್ರದ್ಧಾ ಶ್ರೀನಾಥ್ , ಮತ್ತೊಬ್ಬ ಉತ್ತಮ ನಾಯಕ ಮದುವೆಯಾಗಿದ್ದು, ಅವರನ್ನು ಮತ್ತೆ ಬೆಳ್ಳಿ ಪರದೆಯ ಮೇಲೆ ನೋಡಲು ಸಾಧ್ಯವಿಲ್ಲ ಎಂಬುದು ಬೇಸರದ ಸಂಗತಿ. ನಾಯಕಿಯರೊಂದಿಗೆ ನಟಿಸಲು ಅವರ ಪತ್ನಿ ಮತ್ತು ಕುಟುಂಬದವರು ಇನ್ನು ಒಪ್ಪುವುದಿಲ್ಲ. ಅದಕ್ಕಾಗಿಯೇ ಅವನು ಮುಂದೆ ಹೀರೋ ಓರಿಯೆಂಟೆಡ್ ಚಿತ್ರವನ್ನು ಮಾತ್ರ ಮಾಡಬೇಕಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.