ಹೈದರಾಬಾದ್ : ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ತೆಲುಗಿನಲ್ಲಿ ಮಿಂಚುತ್ತಿರುವ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳೊಂದಿಗಿನ ಟ್ವೀಟರ್ ಚಾಟ್ ಮೂಲಕ ತಮ್ಮ ಜೀವನದ ಹಲವು ಆಸಕ್ತಿದಾಯಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ರಶ್ಮಿಕಾ ಅವರಿಗೆ ಹೋಟೆಲ್ ಗಳಲ್ಲಿ ಉಳಿದುಕೊಳ್ಳುವುದೆಂದರೆ ತುಂಬಾ ಇಷ್ಟವಂತೆ. ಹಾಗೇ ಅವರಿಗೆ ಕದಿಯುವ ಅಭ್ಯಾಸವಿದೆಯಂತೆ. ಒಮ್ಮೆ ಅವರು ಹೋಟೆಲ್ ವೊಂದಕ್ಕೆ ಹೋಗಿದ್ದಾಗ ದಿಂಬಿನ ಹೊದಿಕೆಯನ್ನು ಕದ್ದು ಮನೆಗೆ ತಂದಿದ್ದಾರಂತೆ.
ಹಾಗೇ ಇವರು ಒತ್ತಡಕ್ಕೆ ಒಳಗಾದಾಗ ಸಾಕಷ್ಟು ಕೆಲಸ ಮಾಡುತ್ತಾರಂತೆ, ಸಂಗೀತ ಕೇಳುತ್ತಾ ನೃತ್ಯ ಮಾಡುತ್ತಾರಂತೆ, ಡ್ರೈವ್ ಗೆ ಹೋಗುತ್ತಾರಂತೆ.