ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ ಮಲಯಾಳಂ ಚಿತ್ರ ಅಯ್ಯಪ್ಪನೂಮ್ ಕೊಶಿಯಮ್ ಚಿತ್ರದ ರಿಮೇಕ್ ಚಿತ್ರದಲ್ಲಿ ನಟಿಸುವ ಅವಕಾಶ ಇದೀಗ ನಟಿ ನಿತ್ಯ ಮೆನನ್ ಗೆ ಸಿಕ್ಕಿದೆ.
ಈ ಚಿತ್ರವನ್ನು ಸಾಗರ್ ಕೆ ಚಂದ್ರ ನಿರ್ದೇಶನ ಮಾಡುತ್ತಿದ್ದು, ಚಿತ್ರೀಕರಣ ತ್ವರಿತಗತಿಯಲ್ಲಿ ಸಾಗುತ್ತಿದೆ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಪವನ್ ಕಲ್ಯಾಣ್ ಅವರ ಜೊತೆ ನಟಿಸಲು ಸಾಯಿ ಪಲ್ಲವಿಯನ್ನು ಕರೆತರಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಅವರು ಈ ಯೋಜನೆಯನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟಿದ್ದಾರೆ ಎನ್ನಲಾಗಿದೆ.
ಹೀಗಾಗಿ ನಿರ್ಮಾಪಕರು ಈ ಸ್ಥಾನಕ್ಕೆ ನಟಿ ನಿತ್ಯ ಮೆನನ್ ಅವರನ್ನು ಕರೆತಂದಿದ್ದಾರೆ. ಶೀಘ್ರದಲ್ಲಿಯೇ ಹೊಸ ವೇಳಾಪಟ್ಟಿಯೊಂದಿಗೆ ನಿತ್ಯ ಮೆನನ್ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.