ಶೀಘ್ರದಲ್ಲೇ ತನ್ನ ಪತ್ನಿ, ನಟಿ ಜ್ಯೋತಿಕಾ ಜತೆಗೆ ನಟಿಸುವ ಅವಕಾಶ ಬರುತ್ತಿದೆ ಎಂದು ಆಶಿಸುತ್ತಿರುವುದಾಗಿ ಕೋಲಿವುಡ್ ನಟ ಸೂರ್ಯ ತಿಳಿಸಿದ್ದಾರೆ. ಸೂರ್ಯ ಅಭಿನಯದ ಸಿಂಗಂ 3 ಚಿತ್ರ ಫೆಬ್ರವರಿ 9ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜ್ಯೋತಿಕಾ ಜತೆಗೆ ಅಭಿನಯಿಸುವ ಆಸೆಯನ್ನು ಹೊರಹಾಕಿದ್ದಾರೆ.
’ನಿಮ್ಮನ್ನು ಜ್ಯೋಕಿಕಾ ಜತೆಗೆ ಮತ್ತೆ ತೆರೆಯ ಮೇಲೆ ನೋಡಬಹುದಾ?’ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದ ಸೂರ್ಯ, ನಾವೂ ಅದೇ ರೀತಿ ಅಂದುಕೊಂಡಿದ್ದೇವೆ. ಆದರೆ ಕಾರಣಾಂತರಗಳಿಂದ ಕಳೆದ ವರ್ಷ ಅದು ಸಾಧ್ಯವಾಗಲಿಲ್ಲ. ಆಕೆ (ಜ್ಯೋತಿಕಾ) ಮತ್ತೆ ಸಿನಿಮಾಗಳಿಂದ ವಿಶ್ರಾಂತಿ ತೆಗೆದುಕೊಳ್ಳುವ ಮುನ್ನವೇ ಇನ್ನೊಂದು ಚಿತ್ರದಲ್ಲಿ ಅಭಿನಯಿಸಬೇಕೆಂದಿದ್ದೇನೆ ಎಂದಿದ್ದಾರೆ.
ಮೊದಲು ತಾನು ತಾಯಿ, ಆಮೇಲೆ ನಟಿ ಎಂದು ಜ್ಯೋತಿಕಾ ಯಾವಾಗಲೂ ಹೇಳುತ್ತಿರುತ್ತಾರೆ. ದಿನಾ ಮೇಕಪ್ ಹಾಕಿಕೊಂಡು, ಸಿನಿಮಾ ಶೂಟಿಂಗ್‌ಗಾಗಿ ಹೋಗುವ ಉದ್ದೇಶ ಅವರಿಗಿಲ್ಲ. ಕಳೆದ ಕೆಲವು ತಿಂಗಳಿಂದ ನಮ್ಮಿಬ್ಬರಿಗೆ ಚಿತ್ರಕಥೆಗಳೂ ಬರುತ್ತಿವೆ ಎಂದಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಚಿತ್ರಕ್ಕಾಗಿ ಪ್ರೇಕ್ಷಕರೂ ಎದುರು ನೋಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.