ತಿಂಗಳ ಹಿಂದಷ್ಟೇ ಬೆಳಕಿಗೆ ಬಂದ ಆಂಧ್ರಪ್ರದೇಶದ ಬೃಹತ್ ಡ್ರಗ್ಸ್ ಮಾಫಿಯಾದಲ್ಲಿ ವಿಚಾರಣೆ ಎದುರಿಸುತ್ತಿರುವ ಹತ್ತಾರು ಸಿನಿತಾರೆಯರ ಪೈಕಿ ಒಬ್ಬರಾಗಿರುವ ನಟಿ ಚಾರ್ಮಿ ಕೌರ್ ಹೈದ್ರಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದು, ತನ್ನ ವಿಚಾರಣೆ ವೇಳೆ ವಕೀಲರ ಹಾಜರಾತಿಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ಧಾರೆ.
ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಲಿರುವ ಚಾರ್ಮಿ ಕೌರ್, ಡ್ರಗ್ಸ್ ಹಗರಣದಲ್ಲಿ ನನ್ನ ಹೆಸರು ಕೇಳಿಬಂದಿದ್ದರಿಂದ ನಟಿ ಮತ್ತು ಅವಿವಾಹಿತೆಯಾದ ನನ್ನ ಇಮೇಜ್`ಗೆ ಧಕ್ಕೆಯಾಗಿದೆ. ಡ್ರಗ್ಸ್ ಅಂಶ ಪತ್ತೆಗೆ ರಕ್ತ, ಉಗುರು ಮತ್ತು ಕೂದಲಿನ ಸ್ಯಾಂಪಲ್ ಪಡೆದಿರುವುದರ ಕಾನೂನು ಮೌಲ್ಯವನ್ನ ಚಾರ್ಮಿ ಪ್ರಶ್ನಿಸಿದ್ದಾರೆ.
ಹೈದ್ರಾಬಾದ್`ನ ಪ್ರತಿಷ್ಠಿತ ಕಾಲೇಜು, ಶಾಲಾ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸರಬರಾಜು ಮಾಡಿದ್ದ ಆರೋಪದಡಿ ಬಂಧನಕ್ಕೀಡಾದ ಡ್ರಗ್ಸ್ ಕಿಂಗ್ ಪಿನ್ ಕೆಲ್ವಿನ್ ಕಾಂಟಾಕ್ಟ್ ಲಿಸ್ಟ್`ನಲ್ಲಿ ಹೆಸರುಗಳಿತ್ತೆಂಬ ಕಾರಣಕ್ಕೆ ಚಾರ್ಮಿ ಕೌರ್ ಸೇರಿದಂತೆ ಹತ್ತಾರು ಟಾಲಿವುಡ್ ತಾರೆಯರ ಮೇಲೆ ಎಸ್`ಐಟಿ ತನಿಖೆ ಕೈಗೊಂಡಿದೆ. ಆದರೆ, ಕೆಲ್ವಿನ್ ವಕೀಲ ರೇವಂತ್ ರಾವ್ ಹೇಳುವ ಪ್ರಕಾರ, ಕೆಲ್ವಿನ್ ಟಾಲಿವುಡ್`ನ ಯಾರೊಬ್ಬರ ಜೊತೆಯೂ ಸಂಪರ್ಕವಿಲ್ಲ. ಇದಕ್ಕೆ ಪುಷ್ಠಿ ನೀಡುವ ಯಾವುದೇ ಕಾಲ್ ಡೇಟಾ ಇಲ್ಲ ಎಂದಿದ್ದಾರೆ.
ಈ ಮಧ್ಯೆ, ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್, ಸಿನಿಮಾಟೋಗ್ರಾಫರ್ ಶಾಮ್ ಕೆ ನಾಯ್ಡು, ನಟ ಸುಬ್ಬರಾಜು, ತರುಣ್, ನವ್ದೀಪ್ ಅವರನ್ನ ಎಸೈಟಿ ವಿಚಾರಣೆಗೊಳಪಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ