ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕೈಗೆತ್ತಿಕೊಂಡಿರುವ ಸಿಬಿಐ ಈ ಕೇಸ್ ನಲ್ಲಿ ಡ್ರಗ್ ಜಾಲ ಥಳಕು ಹಾಕಿಕೊಂಡಿದೆ ಎನ್ನೋದನ್ನು ಪತ್ತೆ ಮಾಡಿದೆ.
ಈ ನಡುವೆ ಸುಶಾಂತ್ ಸಿಂಗ್ ಗೆಳತಿ ನಟಿ ರಿಯಾ ಚಕ್ರವರ್ತಿಗೆ ಸಿಬಿಐ ಡ್ರಿಲ್ ನಡೆಸಿದ್ದು, ವಿಚಾರಣೆ ನಡೆಸಿದೆ.
ಡ್ರಗ್ಸ್ ಸಂಬಂಧವಾಗಿ ರಿಯಾ ಚಕ್ರವರ್ತಿಯನ್ನು ಪ್ರಶ್ನೆ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
-
ಎಸ್‌ಎಸ್‌ಆರ್(ಸುಶಾಂತ್ ಸಿಂಗ್ ರಜಪೂತ್) ಯಾವ ರೀತಿಯಲ್ಲಾದರೂ ಡ್ರಗ್ ತೆಗೆದುಕೊಳ್ಳುತ್ತಿದ್ದರಾ?
-
ನೀವು ಡ್ರಗ್ ಸೇವಿಸಿದ್ದೀರಾ?
-
ಎಸ್‌ಎಸ್‌ಆರ್‌ಗೆ ಎಂದಾದರೂ ರಹಸ್ಯವಾಗಿ ಡ್ರಗ್ ನೀಡಿದ್ದೀರಾ?
-
ಎಸ್‌ಎಸ್‌ಆರ್ ಎಂದಾದರೂ ಮಿತಿಮೀರಿದ ಪ್ರಮಾಣದಲ್ಲಿ ಡ್ರಗ್ ಸೇವಿಸಿದ್ದರಾ?
-
ಗೌರವ್ ಆರ್ಯ ಯಾರು?
ಇಂತಹ ಪ್ರಶ್ನೆಗಳನ್ನು ನಟಿ ರಿಯಾ ಚಕ್ರವರ್ತಿಗೆ ಕೇಳಲಾಗಿದೆ ಎನ್ನಲಾಗಿದೆ.