ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಈ ನಡುವೆ ನಟನ ಮೃತದೇಹವಿದ್ದ ಆರ್ ಎನ್ ಕೂಪರ್ ಆಸ್ಪತ್ರೆಯ ಶವಾಗಾರಕ್ಕೆ ನಟಿ ರಿಯಾ ಚಕ್ರವರ್ತಿ ಅದು ಹೇಗೆ ಭೇಟಿ ನೀಡಿದ್ದರು ಎಂಬ ಪ್ರಶ್ನೆ ಕಾಡತೊಡಗಿದೆ.
ಶವಾಗಾರಕ್ಕೆ ಮೃತರ ಕುಟುಂಬ ಸದಸ್ಯರು ಮಾತ್ರ ಪ್ರವೇಶ ಮಾಡಲು ಅನುಮತಿ ಇರುತ್ತದೆ. ಆದರೆ ನಟಿ ರಿಯಾ ಚಕ್ರವರ್ತಿಗೆ ಅವಕಾಶ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಕೇಳಿಬರತೊಡಗಿದೆ.
ಹೀಗಾಗಿ ಮುಂಬೈ ಪೊಲೀಸ್ ಮತ್ತು ಮುಂಬೈ ಮಹಾನಗರ ಪಾಲಿಕೆಗೆ ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗವು ವಿವರಣೆ ನೀಡುವಂತೆ ಸೂಚಿಸಿದೆ.