Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೇ ತಿಂಗಳಿನಲ್ಲಿ ಮದುವೆಯಾಗಲಿದ್ದಾರಾ ನಟ ಸಾಯಿ ತೇಜ್?

ಮೇ ತಿಂಗಳಿನಲ್ಲಿ ಮದುವೆಯಾಗಲಿದ್ದಾರಾ ನಟ ಸಾಯಿ ತೇಜ್?
ಹೈದರಾಬಾದ್ , ಬುಧವಾರ, 17 ಫೆಬ್ರವರಿ 2021 (10:07 IST)
ಹೈದರಾಬಾದ್ : ಬಹಳ ಹಿಂದಿನಿಂದಲೂ ಮೆಗಾ ಹೀರೋ ಸಾಯಿ ತೇಜ್ ಅವರು ಮದುವೆಯಾಗಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿತ್ತು. ಆದರೆ ಇದೀಗ ಸ್ವತಃ  ನಟ ಸಾಯಿ ತೇಜ್ ಅವರೇ ತಮ್ಮ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

ವೈಷ್ಣವ್ ತೇಜ್ ಅವರ ‘ಉಪ್ಪೇನಾ’ ಚಿತ್ರ ಪ್ರಚಾರದ ಅಂಗವಾಗಿ ನಡೆದ ಸಂದರ್ಶನದಲ್ಲಿ ಭಾಗವಹಿಸಿದ್ದ ಸಾಯಿ ತೇಜ್ ಅವರು  ನಾನು ಡೇಟಿಂಗ್ ಮಾಡುತ್ತಿಲ್ಲ ನನ್ನ ಮದುವೆ ಮೇ ತಿಂಗಳಿನಲ್ಲಿ ನಡೆಯಲಿದೆ ಎಂದು ತಮಾಷೆ ಮಾಡಿದ್ದಾರೆ. ಹಾಗೇ ನಿಹಾರಿಕಾ ಮದುವೆಯ ಬಳಿಕ ತಮ್ಮ ಮದುವೆಯ ಬಗ್ಗೆ ಕುಟುಂಬಸ್ಥರು ಒತ್ತಡ ಹೇರುತ್ತಿದ್ದಾರೆ ಎಂದಿದ್ದಾರೆ.

ಆದರೆ ಮಾಹಿತಿ ಪ್ರಕಾರ ನಟನ ತಾಯಿ ಹುಡುಗಿ ಹುಡುಕುತ್ತಿದ್ದಾರೆ. ಅವರು ಈ ವರ್ಷ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಗೀತ ನಿರ್ದೇಶಕನನ್ನು ಮದುವೆಯಾಗಲಿದ್ದಾರಾ ಕೀರ್ತಿ ಸುರೇಶ್?