ಬಾಡಿಗೆ ನೀಡುವಲ್ಲಿ ವಿಫಲವಾಗಿದ್ದರಿಂದ ಬಹುಭಾಷಾ ನಟ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ಪತ್ನಿ ಮಾಲೀಕತ್ವದ ಶಾಲೆಗೆ, ಶಾಲಾ ಕಟ್ಟದ ಮಾಲೀಕ ಬೀಗ ಜಡಿದಿರುವ ಘಟನೆ ವರದಿಯಾಗಿದೆ.
ನಟ ರಜನಿಕಾಂತ್ ಪತ್ನಿ ಲತಾ , ಚೆನ್ನೈನಲ್ಲಿರುವ ಶಾಲಾ ಕಟ್ಟಡದ ಮಾಲೀಕನಿಗೆ ಬಾಡಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಶಾಲೆಗೆ ಬೀಗ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಟ ರಜನಿಕಾಂತ್ ಪತ್ನಿ ಲತಾ ಶಾಲೆಯ ಸಂಚಾಲಕರಾಗಿದ್ದಾರೆ. ಶಾಲಾ ಕಟ್ಟಡದ ಮಾಲೀಕನಿಗೆ ಬಾಡಿಗೆ ಪಾವತಿಸದೆ ಸತಾಯಿಸುತ್ತಿದ್ದರಿಂದ ಆಕ್ರೋಶಗೊಂಡ ಮಾಲೀಕ, ಶಾಲೆಗೆ ಬೀಗ ಜಡಿದಿದ್ದಾನೆ. ಶಾಲೆಗೆ ಬೀಗ ಹಾಕಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಓದುತ್ತಿರುವ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.