ಚೆನ್ನೈ : ನಟ ಸೂರ್ಯ ಹಾಗೂ ನಟ ಕಾರ್ತಿ ಅವರು ಸಹೋದರರಾಗಿದ್ದು ಕಾಲಿವುಡ್ ಚಿತ್ರರಂಗದ ಸ್ಟಾರ್ ನಟರೆನಿಸಿಕೊಂಡಿದ್ದಾರೆ. ಇದೀಗ ಕಾರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸೂರ್ಯ ಅವರನ್ನು ಕೆರಳಿಸುವ ಪರಿಯನ್ನು ತಿಳಿಸಿದ್ದಾರೆ.
ಹೌದು. ಸೂರ್ಯ ಹಾಗೂ ಕಾರ್ತಿ ಚಿಕ್ಕವಯಸ್ಸಿನಿಂದಲೂ ಜೊತೆಯಾಗಿ ಇರುತ್ತಿದ್ದರು, ಈಗಲೂ ಕೂಡ ಸಹೋದರರಿಬ್ಬರು ಜೊತೆ ಸೇರಿ ಪೌಂಡೇಶನ್ ವೊಂದನ್ನು ಸ್ಥಾಪಿಸಿ ಆ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ.
ಇದೀಗ ಕಾರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ವಯಸ್ಸಿನಲ್ಲಿ ಅಣ್ಣನ ಜೊತೆಗಿರುವ ಫೋಟೊವನ್ನು ಹಂಚಿಕೊಂಡು “ನನ್ನ ಸಹೋದರನನ್ನು ಕೆರಳಿಸುವ ಏಕೈಕ ಮಾರ್ಗವೆಂದರೆ ಅವನು ಧರಿಸಿರುವ ಒಂದೇ ರೀತಿಯ ಶರ್ಟ್ ನ್ನು ತಾನು ಧರಿಸುವುದು “ ಎಂಬುದಾಗಿ ತಿಳಿಸಿದ್ದಾರೆ.