Webdunia - Bharat's app for daily news and videos

Install App

ಮಗನಿಗಾಗಿ ವಿಚ್ಛೇದಿತ ಪತ್ನಿ ಜತೆ ಕಾಣಿಸಿಕೊಂಡ ನಟ ಹೃತಿಕ್‌ ರೋಷನ್

sampriya
ಮಂಗಳವಾರ, 28 ಮೇ 2024 (14:09 IST)
Photo By X
ಮುಂಬೈ: ಬಾಲಿವುಡ್‌ ನಟ ಹೃತಿಕ್ ರೋಷನ್ ಮತ್ತು ಸುಸ್ಸಾನೆ ಖಾನ್ ಅವರು ವಿಚ್ಛೇದನ ಪಡೆದು ದೂರವಾದರು ತಮ್ಮ ಮಕ್ಕಳ ವಿಷಯದಲ್ಲಿ ಪೋಷಕರಾಗಿ ಇಬ್ಬರು ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ಹಿಂದೆ ಸರಿಯುವುದಿಲ್ಲ.  

ಈಚೆಗೆ ಹೃತಿಕ್ ರೋಷನ್ ಮತ್ತು ಅವರ ಮಾಜಿ ಪತ್ನಿ ಸುಸ್ಸಾನೆ ಅವರು ಮಗ ಹ್ರೇಹಾನ್ ಅವರ ಪದವಿ ಸಮಾರಂಭಕ್ಕೆ ಒಟ್ಟಿಗೆ ಬಂದು ಮಗನ ಸಾಧನೆಯನ್ನು ಬೆನ್ನು ತಟ್ಟಿದರು. ಈ ವೇಳೆ ಇಬ್ಬರು ಮಗನ ಜತೆ ಫೋಟೋಗೆ ಫೋಸ್‌ ನೀಡಿದರು. ಅದಲ್ಲದೆ ಮಗನ ಪದವಿ ಸಮಾರಂಭದ ವಿಡಿಯೋ ಮಾಡಿ ಸುಸ್ಸಾನೆ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡರು. ಈ ವಿಡಿಯೋದಲ್ಲಿ ಪದವಿ ಸಮಾರಂಭದ ಎಲ್ಲಾ ವಿಶೇಷ ಕ್ಷಣಗಳ ಸೇರಿಸಲಾಗಿತು.

ಅದಲ್ಲದೆ ಈ ಸಮಾರಂಭದಲ್ಲಿ ಇನ್ನೋರ್ವ ಮಗ ಹೃಧನ್‌ ಕೂಡಾ ಭಾಗವಹಿಸಿದ್ದರು. ಈ ವಿಶೇಷ ದಿನದಂದು ಹ್ರೇಹಾನ್ ದೊಡ್ಡ ಬಿಳಿ ಕೇಕ್ ಅನ್ನು ಸಹ ಕತ್ತರಿಸಿದ್ದಾರೆ.

ಹೃತಿಕ್ ಮತ್ತು ಸುಸ್ಸಾನೆ 2000 ರಲ್ಲಿ ವಿವಾಹವಾದರು. ಆದರೆ 2014 ರಲ್ಲಿ ಅವರು ಬೇರೆಯಾಗಲು ನಿರ್ಧರಿಸಿ, ವಿಚ್ಛೇದನ ಪಡೆದು ದೂರವಾದರು. ದಂಪತಿಗಳಾಗಿ ಇವರಿಬ್ಬರೂ ದೂರವಾದರೂ ಸ್ನೇಹಿತರಾಗಿ ಆಗಾಗ ಸಂತಸದಿಂದಿರುವ ಕ್ಷಣಗಳಲ್ಲಿ ಭಾಗಿಯಾಗಿರುತ್ತಾರೆ. ಅದಲ್ಲದೆ ಒಟ್ಟಿಗೆ ಕ್ಯಾಮಾರಗಳಿಗೆ ಪೋಸ್‌ ನೀಡುತ್ತಿರುತ್ತಾರೆ. ಇದೀಗ ಮಗನ ವಿದ್ಯಾಭ್ಯಾಸದ ಪ್ರಮುಖ ಘಟ್ಟದಲ್ಲಿ ಪೋಷಕರಾಗಿ ಬೆಂಬಲ ಸೂಚಿಸಿದ್ದಾರೆ.

ಹೃತಿಕ್ ರೋಶನ್‌ ಅವರು ಪ್ರಸ್ತುತ ನಟ-ಗಾಯಕ ಸಬಾ ಆಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮತ್ತೊಂದೆಡೆಸುಸ್ಸಾನ್ ನಟ ಅರ್ಸ್ಲಾನ್ ಗೋನಿ ಅವರೊಂದಿಗೆ ಡೇಟಿಂಗ್‌ ನಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments