ತಮಿಳು ಹೀರೋ ಧನುಷ್ ಮಂಗಳವಾರ ಮದ್ರಾಸ್ ಹೈಕೋರ್ಟ್‌ಗೆ ಹಾಜರಾಗಿದ್ದಾರೆ. ಧನುಷ್ ತಂದೆತಾಯಿ ತಾವೇ ಎಂದು ತಿರುಪ್ಪವನಂಕಿ ಮೂಲದ ಕದಿರೇಷನ್, ಮೀನಾಕ್ಷಿ ದಂಪತಿಗಳು ಪ್ರಕರಣ ದಾಖಲಿಸಿದ್ದರು. ಧನುಷ್ ಅಸಲಿ ಹೆಸರು ಕಲೈಯರಸನ್ ಎಂದೂ, 2002ರಲ್ಲಿ ನಟನಾದ ಬಳಿಕ ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂದು ದಂಪತಿಗಳು ಕೋರ್ಟ್ ಮೆಟ್ಟಿಲೇರಿದ್ದರು.
ತಮ್ಮ ಜೀವನ ನಿರ್ವಹಣೆಗೆ ಹಣ ನೀಡಬೇಕೆಂದು ಮೇಲೂರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್...ಮಧುರೈ ಪೀಠದ ಮುಂದೆ ಹಾಜರಾಗಬೇಕೆಂದು ಧನುಷ್‌ಗೆ ಸಮನ್ಸ್ ಜಾರಿ ಮಾಡಿತ್ತು.
ದಂಪತಿಗಳ ಆರೋಪದ ಮೇರೆಗೆ ಹುಟ್ಟುಮಚ್ಚೆ ಪರೀಕ್ಷೆಗೆ ಧನುಷ್‌ರನ್ನು ಕರೆಯಲಾಗಿತ್ತು. ಹಾಗಾಗಿ ಮಂಗಳವಾರ ಧನುಷ್ ಕೋರ್ಟ್‌ಗೆ ಹಾಜರಾಗಿದ್ದಾರೆ. ಧನುಷ್ ಬರ್ತ್ ಮಾರ್ಕ್ಸ್ ಪರೀಕ್ಷಿಸಬೇಕೆಂದು ಸರಕಾರಿ ವೈದ್ಯರಿಗೆ ಜ್ಯೂಡಿಷಿಯಲ್ ಚೇಂಬರ್ ಆದೇಶಿಸಿದೆ. ಪ್ರಕರಣದ ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.