ಹೈದರಾಬಾದ್: ಟಾಲಿವುಡ್ ಮೋಸ್ಟ್ ವಾಂಟೆಡ್ ಜೋಡಿ ಪ್ರಭಾಸ್-ಅನುಷ್ಕಾ ಶೆಟ್ಟಿ ಮದುವೆಯಾಗಬೇಕು ಎಂದು ಫ್ಯಾನ್ಸ್ ಬಹಳ ದಿನಗಳಿಂದ ಆಗ್ರಹಿಸುತ್ತಲೇ ಇದ್ದಾರೆ. ಆದರೆ ಇಬ್ಬರ ಕಡೆಯಿಂದಲೂ ಇದುವರೆಗೆ ಮದುವೆ ಸುದ್ದಿ ಬಂದಿಲ್ಲ.
ಈ ನಡುವೆ ಟಾಲಿವುಡ್ ನಟ ಅದಿವಿ ಸೇಷ್ ಪ್ರಭಾಸ್-ಅನುಷ್ಕಾ ಮದುವೆಯಾಗುವವರೆಗೂ ಮದುವೆಯಾಗಲ್ಲ ಎಂದು ಪ್ರತಿಜ್ಞೆ ಮಾಡಿಕೊಂಡಿದ್ದಾರೆ!
ತಮ್ಮ ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾ ಮೇಜರ್ ಪ್ರಮೋಷನ್ ನಲ್ಲಿ ಪತ್ರಕರ್ತರು ಮದುವೆ ಯಾವಾಗ ಎಂದು ಕೇಳಿದ್ದಕ್ಕೆ ಅದಿವಿ ಪ್ರಭಾಸ್, ಅನುಷ್ಕಾ ಮದುವೆಯಾಗುವವರೆಗೂ ಮದುವೆಯಾಗಲ್ಲ ಎಂದಿದ್ದಾರೆ. ಎಷ್ಟೋ ಜನ ತಮ್ಮ ಬ್ಯಾಚುಲರ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ನಾನೂ ಅವರಂತೆ ಇರಲು ಬಯಸುತ್ತೇನೆ ಎಂದಿದ್ದಾರೆ.