ಆ ದಿನಗಳು ಚಿತ್ರದ ಮೂಲಕ ಇಡೀ ಕರ್ನಾಟಕ ಮನೆಮಾತಾದ ನಟ ಚೇತನ್. ಆಮೇಲೆ ಅವರು ಮೈನಾ ಚಿತ್ರದಲ್ಲಿನ ಅಮೋಘ ಅಭಿನಯ ಸಿನಿಮಾ ಪ್ರಿಯರನ್ನು ಸೆಳೆಯಿತು. ಅದಾದ ಬಳಿಕ ಅವರು ಸ್ವಲ್ಪ ಸೈಲೆಂಟ್ ಆದರು. ಅಂದ್ರೆ ಚಿತ್ರರಂಗದಿಂದ. ಉಳಿದಂತೆ ಅವರ ಸಾಮಾಜಿಕ ಸೇವೆ ಮುಂದುವರಿದಿದ್ದು, ಯಾವುದೇ ಸದ್ದಿಲ್ಲದಂತೆ.
ಇತ್ತೀಚೆಗೆ ಅವರು ಮಾಲೂರಿನ ಸರಕಾರಿ ಶಾಲೆಗೆ ಹೋಗಿ ಪಾಠ ಮಾಡಿ ಬಂದಿದ್ದಾರೆ. ಅದಾದ ಮೇಲೆ ಈಗ ಕೊಡಗಿನ ಅರಣ್ಯ ಪ್ರದೇಶದಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಧೋರಣೆ ಬಗ್ಗೆ ಹೋರಾಟಕ್ಕೆ ನಿಂತಿದ್ದಾರೆ ಚೇತನ್. ಆದಿವಾಸಿ ಜನಾಂಗವನ್ನು ಸರಕಾರ ನಡೆಸಿಕೊಳ್ಳುತ್ತಿರುವ ಬಗ್ಗೆ ಅವರಿಗೆ ತೀವ್ರ ಬೇಸರವಿದೆ.
ಅವರ ಜೀವನ ತುಂಬಾ ದುಸ್ತರವಾಗಿದೆ. ಕಾಫಿ ಎಸ್ಟೇಟ್ ಮಾಲೀಕರು ಅವರಿಗೆ ಕನಿಷ್ಟ ದಿನಗೂಲಿಯನ್ನೂ ಕೊಡುತ್ತಿಲ್ಲ. ದುಡಿಮೆಗೆ ತಕ್ಕ ಪ್ರತಿಫಲ ಅವರಿಗೆ ಸಿಗುತ್ತಿಲ್ಲ. ಆದಿವಾಸಿಗಳ ನಂತರವೇ ನಾವೆಲ್ಲಾ. ಅವರಿಂದಲೇ ನಾವು. ಅವರ ಮೂಲಭೂತ ಹಕ್ಕುಗಳನ್ನು ಕಾಪಾಡಿ, ಅವರ ವಿರುದ್ಧದ ದೌರ್ಜನ್ಯವನ್ನು ತಡೆಯಿರಿ ಎಂದು ಸರಕಾರಕ್ಕೆ ತಮ್ಮ ಅಹವಾಲು ಕಳುಹಿಸಿದ್ದಾರೆ ಸ್ಯಾಂಡಲ್‌ವುಡ್ ನ ಹೊಸ ಚೇತನ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.