ಬೆಂಗಳೂರು: 2018 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ‘ಅಮ್ಮನ ಮನೆ’ ಸಿನಿಮಾದಲ್ಲಿನ ನಟನೆಗಾಗಿ ರಾಘವೇಂದ್ರ ರಾಜಕುಮಾರ್ ಅತ್ಯುತ್ತಮ ನಟ ಮತ್ತು ‘ಇರುವುದೆಲ್ಲವ ಬಿಟ್ಟು’ ಸಿನಿಮಾಗಾಗಿ ಮೇಘನಾ ರಾಜ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ಉಳಿದಂತೆ ದಯಾಳ್ ಪದ್ಮನಾಭ್ ನಿರ್ದೇಶನದ ಜಯರಾಮ್ ಕಾರ್ತಿಕ್ ನಾಯಕರಾಗಿರುವ ‘ಆ ಕರಾಳ ರಾತ್ರಿ’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಹಿರಿಯ ನಟ ಶ್ರೀನಿವಾಸ ಮೂರ್ತಿಗೆ ಜೀವಮಾನ ಸಾಧನೆಗಾಗಿ ಡಾ. ರಾಜ್ ಕುಮಾರ್ ಪ್ರಶಸ್ತಿ, ನಿರ್ದೇಶಕ ಪಿ ಶೇಷಾದ್ರಿ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಿಎಸ್ ಬಸವರಾಜು ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ಲಭಿಸಿದೆ.
ಅತ್ಯುತ್ತಮ ಮನರಂಜನಾ ಚಿತ್ರವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಪ್ರಶಸ್ತಿಗೆ ಭಾಜನವಾಗಿದೆ. ಹೂವು ಬಳ್ಳಿ ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿ, ಅತ್ಯುತ್ತಮ ಸಂಗೀತ ನಿರ್ದೇಶಕ ರವಿ ಬಸ್ರೂರು, ಅತ್ಯುತ್ತಮ ಪೋಷಕ ನಟ ಬಾಲಾಜಿ ಮನೋಹರ್, ಅತ್ಯುತ್ತಮ ಬಾಲ ನಟ ಮಾಸ್ಟರ್ ಏರನ್, ಬಾಲನಟಿ ಬೇಬಿ ಸಿಂಚನ, ಅತ್ತುತ್ತಮ ಗಾಯಕ ಸಿದ್ಧಾರ್ಥ್ ಬೆಳ್ಮಣ್ಣು, ಗಾಯಕಿ ಕಲಾವತಿ ದಯಾನಂದ ಪ್ರಶಸ್ತಿ ಪಡೆದಿದ್ದಾರೆ.