ದುಬೈನ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಭಾರತದ ಅತಿ ದೊಡ್ಡ ಮೋಶನ್ ಪಿಲ್ಚರ್ ಮಹಾಭಾರತಕ್ಕಾಗಿ 1000 ಕೋಟಿ ರೂ. ಬಂಡವಾಳ ಹೂಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಜಾಹೀರಾತು ನಿರ್ದೇಶನದಲ್ಲಿ ಖ್ಯಾತಿ ಗಳಿಸಿರುವ ವಿ.ಎ. ಶ್ರೀಕುಮಾರ್ ಮೆನನ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ.
ಎರಡು ಭಾಗಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಸೆಪ್ಟೆಂಬರ್ 2018ಕ್ಕೆ ಮೊದಲ ಭಾಗದ ಚಿತ್ರೀಕರಣ ಆರಂಭವಾಗಲಿದ್ದು, 2020ಕ್ಕೆ ತೆರೆ ಕಾಣಲಿದೆ. ಇದಾದ 90 ದಿನಗಳಲ್ಲಿ ಚಿತ್ರದ 2ನೇ ಭಾಗ ತೆರೆ ಕಾಣಲಿದೆ.
ಪ್ರಾಥಮಿಕವಾಗಿ ಇಂಗ್ಲೀಷ್, ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಲಿದ್ದು, ಬಳಿಕ ಇತರ ಭಾಷೆಗಳಿಗೆ ಡಬ್ ಆಗಲಿದೆ.ಬಿ.ಆರ್. ಶೆಟ್ಟಿ ಸಂಸ್ಥೆಯಿಂದ ತೆರೆ ಕಾಣಲಿದೆ.
ಚಿತ್ರದಲ್ಲಿ ಬಾಲಿವುಡ್ ಮತ್ತು ಹಾಲಿವುಡ್`ನ ಖ್ಯಾತನಾಮರು, ತಂತ್ರಜ್ಞರು ಕಾಣಿಸಿಕೊಳ್ಲಲಿದ್ದಾರೆ.ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಎಂ.ಟಿ. ವಾಸುದೇವನ್ ಅವರ ಭೀಮನ ಕಣ್ಣಿನಲ್ಲಿ ಮಹಾಭಾರತ ಹೇಳಿಸುವ `ರಂಡಮೂಜಮ್’ ಕಾದಂಬರಿ ಆಧರಿತ ಚಿತ್ರ ಇದಾಗಿದೆ.