2ಜಿ..3ಜಿ...4ಜಿ... ಅದರ ಮುಂದುವರೆದ ತರಂಗಾಂತರ 5ಜಿ... ಇನ್ನೂ ನಮ್ಮ ದೇಶದಲ್ಲಿ 4ಜಿ ಸೇವೆಗಳೇ ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಅದಾಗಲೆ ಇನ್ನೊಂದು ತಲೆಮಾರಿನ ತರಂಗಾಂತರ ಬಂದಿದೆ. ಜಗತ್ತಿನಲ್ಲೇ ಮೊದಲ ಬಾರಿ 5ಜಿ ಸ್ಮಾರ್ಟ್‌ಫೋನನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.
ಚೀನಾದ ಝಡ್‌ಟಿಇ ಕಂಪೆನಿ ಗಿಗಾಬಿಟ್ ಹೆಸರಿನ ಈ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಸೆಕೆಂಡಿಗೆ 1ಜಿಬಿ ವೇಗದಿಂದ ಡಾಟಾ ಡೌನ್‌ಲೋಡ್ ಮಾಡಿಕೊಳ್ಳುತ್ತದೆ. ಸದ್ಯಕ್ಕೆ ಬಳಸುತ್ತಿರುವ 4ಜಿ ಗಿಂತಲೂ 10 ಪಟ್ಟು ಹೆಚ್ಚು ವೇಗವಾಗಿ ಇದು ಕೆಲಸ ಮಾಡುತ್ತದೆ. ಸ್ಪೇನ್ ರಾಜಧಾನಿ ಬಾರ್ಲಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಈ ಫೋನನ್ನು ಬಿಡುಗಡೆ ಮಾಡಲಾಗಿದೆ.
ಆದರೆ ಈ ಫೋನ್ ವಾಣಿಜ್ಯ ಬಳಕೆಗೆ ಬರಲು 2020ರತನಕ ಕಾಯಬೇಕು. ಭವಿಷ್ಯದಲ್ಲಿ ಕೇವಲ ಒಂದು ಸೆಕೆಂಡ್‌ನಲ್ಲೇ ಸಿನಿಮಾ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಇನ್ನೊಂದು ಕಡೆ ದಕ್ಷಿಣ ಕೊರಿಯಾ ಕಂಪೆನಿ ಕೇಟಿ ಕಾರ್ಪ್ 2018ರ ವಿಂಟರ್ ಒಲಂಪಿಕ್ಸ್‌ನಲ್ಲಿ 5ಜಿ ಸೇವೆಗಳನ್ನು ಪ್ರಯೋಗಾತ್ಮಕವಾಗಿ ನೀಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.