ನವದೆಹಲಿ : ಟ್ವೀಟರ್ ನಲ್ಲಿ ಹೆಚ್ಚಾಗಿ ಹ್ಯಾಶ್ ಟ್ಯಾಗ್ ಗಳನ್ನು ಬಳಸುತ್ತಾರೆ. ಟ್ವಿಟ್ಟರ್ ಬಳೆದಾರರು ಟ್ರೆಂಡಿಂಗ್ ವಿಷಯವಿದ್ದರೆ ಹ್ಯಾಶ್ ಟ್ಯಾಗ್ಗಳನ್ನು ಬಳಸುತ್ತಾರೆ. ಈ ಬಾರಿ 2019ರ ಮೊದಲಾರ್ಧದಲ್ಲಿ ಬಳಸಿರುವ ಅತಿ ಹೆಚ್ಚಿನ ಬಾರಿ ಟ್ವೀಟ್ ಮಾಡಲಾದ ಹ್ಯಾಶ್ ಟ್ಯಾಗ್ ಗಳು ಯಾವುದೆಂದು ಬಹಿರಂಗಪಡಿಸಲಾಗಿದೆ.
ಹೌದು. ಇಂಟರ್ ನೆಟ್ನಲ್ಲಿ ಬಳಕೆ ಮಾಡುವ ಹ್ಯಾಶ್ ಟ್ಯಾಗ್ ಗೆ 12ರ ಹರೆಯ. ಟ್ವಿಟ್ಟರ್ ನಲ್ಲಿ ಅನೇಕ ಜನರು ಬಳಸಿದ ಹ್ಯಾಶ್ಟ್ಯಾಗ್ ಗಳು ಬೇಗನೆ ಟ್ರೆಂಡ್ ಸೃಷ್ಠಿಸಿಕೊಳ್ಳುತ್ತದೆ. ಹೆಚ್ಚು ಬಾರಿ ಬಳಕೆಯಾದ ಹ್ಯಾಶ್ ಟ್ಯಾಗ್ಗಳು ಟಾಪ್ ಟ್ರೆಂಡಿಂಗ್ನಲ್ಲಿ ಗೋಚರಿಸುತ್ತದೆ.
ಹಾಗಾಗಿ ಈ ಬಾರಿ ಅತಿ ಹೆಚ್ಚಿನ ಬಾರಿ ಟ್ವೀಟ್ ಮಾಡಲಾದ ಹ್ಯಾಶ್ ಟ್ಯಾಗ್ ಎಂದರೆ ಅದು #Viswasam ತಮಿಳು ಆಕ್ಷನ್ ಡ್ರಾಮಾ ಫಿಲ್ಮ್ ಕುರಿತಾದ ಹ್ಯಾಶ್ ಟ್ಯಾಗ್ ಪ್ರಾಂತೀಯ ಮನರಂಜನೆ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನು ಲೋಕಸಭೆ ಚುನಾವಣೆಯ ಕುರಿತಂತೆ #LokSabhaElections2019 ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಅಂತೆಯೇ ಕ್ರಿಕೆಟ್ ವಿಭಾಗದಲ್ಲಿ #CWC19 ಹ್ಯಾಶ್ ಟ್ಯಾಗ್ ಮೂರನೇ ಸ್ಥಾನ ಪಡೆದಿದೆ.