ಪ್ರಮುಖ ಚೀನಾ ಕಂಪೆನಿ ಷಿಯೋಮಿಗೆ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ ಆ ಕಂಪೆನಿ ಗ್ಲೋಬಲ್ ಉಪಾಧ್ಯಕ್ಷ ಸೋಷಿಯಲ್ ಮಾಧ್ಯಮ ದಿಗ್ಗಜ ಫೇಸ್ಬುಕ್ ಸೇರಲಿದ್ದಾರೆ. ಫೇಸ್ಬುಕ್ ಸಿಇಓ ಮಾರ್ಕ್ ಬುಕರ್ ಬರ್ಗ್ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಹ್ಯೂಗೋ ಬರ್ರಾ ಶೀಘ್ರದಲ್ಲೇ ತಮ್ಮ ಕಂಪೆನಿಯ ಭಾಗವಾಗುತ್ತಿದ್ದಾರೆ ಎಂದಿದ್ದಾರೆ ಜುಕರ್ಬರ್ಗ್. ನಮ್ಮ ತಂಡದಲ್ಲಿ ಹ್ಯೂಗೋ ಸೇರ್ಪಡೆಯಾಗುತ್ತಿರುವುದು ತುಂಬಾ ಸಂತೋಷ ತಂದಿದೆ. ಅವರ ನೇತೃತ್ವದಲ್ಲಿ ವರ್ಚುವಲ್ ರಿಯಾಲಿಟಿ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವುದು ಖುಷಿಯ ಸಂಗತಿ ಎಂದಿದ್ದಾರೆ.
ಭವಿಷ್ಯದಲ್ಲಿ ವರ್ಚುವಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿದೇ ಹವಾ. ಅವರು ಈ ಹಿಂದೆಗಿಂತ ಹೆಚ್ಚು ಸೃಜನಾತ್ಮಕವಾಗಿ ಕಂಪೆನಿ ಅಭಿವೃದ್ಧಿಗೆ ಶ್ರಮಿಸುತ್ತಾರೆಂಬ ವಿಶ್ವಾಸ ಇದೆ ಎಂದು ಜುಕರ್ಬರ್ಗ್ ಪೋಸ್ಟ್ ಮಾಡಿದ್ದಾರೆ. ಈ ವಿಷಯವನ್ನು ಬುರ್ರಾ ಸಹ ಖಚಿತಪಡಿಸಿದ್ದಾರೆ. ಶೀಘ್ರದಲ್ಲೇ ಫೇಸ್ಬುಕ್ ಸೇರುತ್ತಿರುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.