ನವದೆಹಲಿ : ಜಯಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸ್ ಆ್ಯಪ್ ಇದೀಗ ಬಳಕೆದಾರರನ್ನು ಸೆಳೆಯಲು ಹೊಸ ಅಪ್ಡೇಟ್ ಫೀಚರ್ಗಳನ್ನು ಪರಿಚಯಿಸುತ್ತಿದೆ.
ವಾಟ್ಸ್ಆಯಪ್ ತನ್ನ ಬಳಕೆದಾರರಿಗಾಗಿ ಬೂಮರಾಂಗ್ ವಿಡಿಯೋಸ್, ಮೆಮೊಜಿ ಸ್ಟಿಕ್ಕರ್ಸ್, ಡಾರ್ಕ್ ಮೋಡ್ ಮತ್ತು ಆಲ್ಬಮ್ಸ್ ಫೀಚರ್ ಅನ್ನು ಪರಿಚಯಿಸುತ್ತಿದೆ. ಬೂಮರಾಂಗ್ ವಿಡಿಯೋಸ್ ಇನ್ಸ್ಟಾಗ್ರಾಂ ಬಳಕೆದಾರರು ಹೆಚ್ಚಾಗಿ ಬಳಸುತ್ತಿದ್ದು, ಇನ್ನುಮುಂದೆ ಇದು ವಾಟ್ಸ್ ಆ್ಯಪ್ ನಲ್ಲೂ ಲಭ್ಯವಾಗಲಿದೆ.
ವಾಟ್ಸ್ಆಯಪ್ ಬಳಕೆದಾರರಿಗಾಗಿ ವೈಯಕ್ತಿಕ ಸ್ಟಿಕ್ಕರ್ಸ್ ಹಾಗೂ ಎಮೋಟೈಕಾನ್ಗಳನ್ನು ರಚಿಸುವ ಸಲುವಾಗಿ ಮೆಮೊಜಿ ಸ್ಟಿಕ್ಕರ್ಸ್ ಆಯ್ಕೆಯೊಂದನ್ನು ಪರಿಚಯಿಸುತ್ತಿದೆ. ಬಳಕೆದಾರರ ಕಣ್ಣಿನ ಸುರಕ್ಷತೆಗಾಗಿ ಫೇಸ್ ಬುಕ್ ನಲ್ಲಿ ಡಾರ್ಕ್ ಮೋಡ್ ಅನ್ನು ಪರಿಚಯಿಸಲಾಗಿದೆ. ಇದು ಈಗ ವಾಟ್ಸ್ ಆ್ಯಪ್ ನಲ್ಲಿಯೂ ಲಭ್ಯವಿದೆ. ಹಾಗೇ ಫೋಟೋ, ವಿಡಿಯೋಗಳನ್ನು ಸಂಗ್ರಹಿಸಿಲು ಆಲ್ಬಮ್ ಎಂಬ ಆಯ್ಕೆಯನ್ನು ನೀಡಲಾಗಿದೆ.