ಉಚಿತ ಮೆಸೇಜ್, ಕಾಲಿಂಗ್, ವಿಡಿಯೋ ಕಾಲಿಂಗ್ ಸೇರಿದಂತೆ ವಿವಿಧ ಸೇವೆಗಳ ಮೂಲಕ ವಿಶ್ವಾದ್ಯಂತ ಗಮನ ಸೆಳೆದಿರುವ ವಾಟ್ಸಾಪ್ ಇದೀಗ ಚಾಟ್ ವಿಂಡೋ ಮೂಲಕ ನೇರವಾಗಿ ಯೂಟ್ಯೂಬ್ ವಿಡಿಯೋ ನೋಡುವ ಫೀಚರನ್ನ ಪರಿಚಯಿಸುವ ಪ್ರಯೋಗ ನಡೆಸುತ್ತಿದೆ.
ಈ ಹಿಂದೆ ವಾಟ್ಸಾಪ್`ನಲ್ಲಿ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿದರೆ ಯೂಟ್ಯೂಬ್`ಗೆ ಹೋಗಿ ವಿಡಿಯೋ ನೋಡಬೇಕಿತ್ತು. ಇನ್ಮುಂದೆ ವಾಟ್ಸಾಪ್`ನಲ್ಲಿ ಲಿಂಕ್ ಕ್ಲಿಕ್ ಮಾಡಿದರೆ ಅಲ್ಲಿಯೇ ಪ್ಲೇ ಮಾಡುವ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಇದರ ಜೊತೆಗೆ ವಿಡಿಯೋ ಜೂಮ್ ಮಾಡಿ ಫುಲ್ ಸ್ಕ್ರೀನ್ ಮಾಡುವ ಮತ್ತು ಚಿಕ್ಕದಾಗಿಸುವ ಫೀಚರ್ ಸಹ ಪರಿಚಯಿಸಲು ಮುಂದಾಗಿದೆ.
ಪ್ರಯೋಗ ಯಶಸ್ವಿಯಾದರೆ ಐಒಎಸ್ ತಂತ್ರಜ್ಞಾನದ ಸ್ಮಾರ್ಟ್ ಫೋನ್`ಗಳಲ್ಲಿನ ವಾಟ್ಸಾಪ್`ನಲ್ಲಿ ಯೂಟ್ಯೂಬ್ ವಿಡಿಯೋ ಪ್ಲೇ ಆಗುವ ಸೌಲಭ್ಯ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ