ಪ್ರಮುಖ ವಾಹನ ತಯಾರಿ ಕಂಪನಿ ಫೋಕ್ಸ್ ವ್ಯಾಗನ್ ಚೀನಾದಲ್ಲಿ ಸಂಚಲನಾತ್ಮಕ ಪ್ರಕಟಣೆ ಮಾಡಿದೆ. ಆ ದೇಶದಲ್ಲಿ ಮಾರಾಟ ಮಾಡಿದ 50 ಸಾವಿರ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಹೇಳಿದೆ. ಇದಕ್ಕೆ ಕೆಲವು ತಾಂತ್ರಿಕ ದೋಷಗಳೇ ಕಾರಣ ಎನ್ನಲಾಗಿದೆ.
ಮಾರಾಟ ಮಾಡಿದ ಕಾರುಗಳಲ್ಲಿ ಬ್ರೇಕುಗಳಲ್ಲಿ ಸಮಸ್ಯೆ, ಕ್ರೂಸ್ ಕಂಟ್ರೋಲ್ ವ್ಯವಸ್ಥೆಯಲ್ಲಿನ ಲೋಪದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಕಂಪನಿ ಬಂದಿದೆ. 2012ರ ಜುಲೈ 1ರಿಂದ 2015ರ ಆಗಸ್ಟ್ 6ರ ನಡುವೆ ಚೀನಾದಲ್ಲಿ ಮಾರಾಟ ಮಾಡಿದ ಬೀಟೆಲ್ ಸೇರಿದಂತೆ ಹಲವಾರು ಮಾಡೆಲ್‌ಗಳನ್ನು ಹಿಂಪಡೆಯುತ್ತಿದೆ.
2012 ಜುಲೈ 1ರಿಂದ 2013 ಜುಲೈ 6ರ ನಡುವೆ ಮಾರಾಟ ಮಾಡ್ದಿದ ಗಾಲ್ಪ್ಸ್ ಮಾಡೆಲ್ ಕಾರುಗಳನ್ನು ರೀಕಾಲ್ ಮಾಡುತ್ತಿರುವುದಾಗಿ ಚೀನಾ ಗುಣಮಟ್ಟ ಪರಿವೀಕ್ಷಣಾ ಸಂಸ್ಥೆ (ಎಎಸ್‌ಡಿಐಕ್ಯು) ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಕಾರಿನಲ್ಲಿ ತಲೆದೋರಿರುವ ತಾಂತ್ರಿಕ ಸಮಸ್ಯೆಗಳನ್ನು ಉಚಿತವಾಗಿ ಪರಿಷ್ಕರಿಸುವುದಾಗಿ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.