ಸ್ಫೋರ್ಟ್ಸ್ ಉಪಯುಕ್ತ ವಾಹನಗಳ (ಎಸ್‌ಯುವಿ) ಮೇಲೆ ಫೋಕ್ಸ್‌ವ್ಯಾಗನ್ ಇನ್ನಷ್ಟು ದೃಷ್ಟಿ ಹರಿಸಿದೆ. ಈ ವಿಭಾಗದಲ್ಲಿ ಟಿಗ್ವಾನ್ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬೆಲೆ ರೂ.25.92-31.12 ಲಕ್ಷಗಳು (ಎಕ್ಸ್-ಶೋರೂಂ ದೆಹಲಿ) ಎಂದು ನಿಗದಿಪಡಿಸಿದೆ.
ಟೊಯೋಟಾ ಫಾರ್ಚ್ಯೂನರ್, ಫೋರ್ಡ್ ಎಂಡೀವರ್‌ನಂತಹ ವಾಹನಗಳಿಗೆ ಇದು ಪೈಪೋಟಿ ನೀಡುವ ಸಾಧ್ಯತೆಗಳಿವೆ. ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ತಮ್ಮ ಅತ್ಯಂತ ದುಬಾರಿ ವಾಹನ ಟಿಗ್ವಾನ್ ಎಂದು ಫೋಕ್ಸ್‌ವ್ಯಾಗನ್ ಗ್ರೂಪ್ ಡೈರೆಕ್ಟರ್ (ಭಾರತ ಕಾರು ಮಾರಾಟ) ಮೈಕೇಲ್ ಮೇಯರ್ ತಿಳಿಸಿದ್ದಾರೆ.
ಎಸ್‍ಯುವಿ ವಿಭಾಗದಲ್ಲಿ ದೃಷ್ಟಿಹರಿಸಿದ್ದೇವೆಂದು, ವಾಹನದ ಉದ್ದ 4 ಮೀಟರ್ ಒಳಗೆ ಇರಬೇಕೆ ಇಲ್ಲವೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಮಾರಾಟವನ್ನು ನಿಲ್ಲಿಸಿದ್ದ ಎಗ್ಸಿಕ್ಯೂಟೀವ್ ಸೆಡಾನ್ ಪಾಸಟ್‌ನ್ನು ಮತ್ತೆ ಬಿಡುಗಡೆ ಮಾಡಲಿರುವುದಾಗಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.