ಚೀನಾ ಮೂಲದ ಸ್ಮಾರ್ಟ್‌ಪೋನ್ ತಯಾರಿಕ ಸಂಸ್ಥೆಯಾಗಿರುವ ವಿವೋ, 4ಜಿ ವಿಓಎಲ್‌ಟಿಇ ಹೊಂದಿರುವ ಸ್ಮಾರ್ಟ್‌ಪೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯ ಪೋನ್‌ಗಳು ಗ್ರಾಹಕರಿಗೆ 7,490 ರೂಪಾಯಿಗಳಲ್ಲಿ ಲಭ್ಯವಾಗಲಿದೆ.
ವೈ21ಎಲ್ ವೈಶಿಷ್ಟ್ಯದ 854x480 ಪಿಕ್ಸೆಲ್ಸ್ ಜೊತೆಗೆ 4.5 ಇಂಚಿನ ಎಫ್‌ಡಬ್ಲ್ಯೂವಿಜಿಎ ಡಿಸ್‌ಪ್ಲೇ ಮತ್ತು 1 ಜಿಬಿ ರ್ಯಾಮ್‌ನೊಂದಿಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 410 ಪ್ರೊಸೆಸರ್ ಒಳಗೊಂಡಿದೆ.
ಈ ಹೊಸ ವೈಶಿಷ್ಟ್ಯದ ಸ್ಮಾರ್ಟ್‌ಪೋನ್‌ಗಳು 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯದೊಂದಿಗೆ 128 ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯಹೊಂದಿದೆ. ಫನ್‌ಟಚ್ ಓಎಸ್ 2.5 ಆಧಾರಿತ ಆಂಡ್ರಾಯ್ಡ್ 5.1 ಲಾಲಿಪಾಪ್ ಆಪರೇಟಿಂಗ್ ಸಿಸ್ಟಮ್ ಹಾಗೂ 2,000 ಎಮ್‌ಎಚ್‌ಝಡ್ ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಹೊಂದಿದೆ.
ಗ್ರಾಹಕರಿಗೆ ಈ ಹೊಸ ವೈಶಿಷ್ಟ್ಯದ ಸಾಧನ ನೀಡುವ ಮೂಲಕ ನಾವು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಬದ್ಧರಾಗಿದ್ದೇವೆ ಎಂದು ತೊರಿಸಿದಂತಾಗಿದೆ ಎಂದು ವಿವೋ ಇಂಡಿಯಾ ಸಂಸ್ಥೆಯ ವಿವೇಕ್ ಜಾಂಗ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಈ ಸಾಧನಗಳು 5 ಮೆಗಾ ಪಿಕ್ಸೆಲ್ಸ್ ರಿಯರ್ ಕ್ಯಾಮೆರಾ ಹಾಗೂ 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಜೊತೆಗೆ ಪಾಮ್ ಮತ್ತು ವೈಸ್ ಕ್ಯಾಪ್ಚರ್ ವಿಶೇಷತೆಯನ್ನು ಒಳಗೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ