ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸಾಪ್ ಉಪಗೋಗಿಸುತ್ತಿದ್ದ ಗ್ರಾಹಕರಿಗೆ ಒಂದು ಬೇಸರದ ವಿಷಯವೆನೆಂದರೆ ಫೇಸ್ ಬುಕ್ ಒಡೆತನದ ಈ ವಾಟ್ಸಾಪ್ ಮೆಸೇಂಜರ್ ಆಪ್ ಡಿಸೆಂಬರ್ 31ರಿಂದ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ.
ವಾಟ್ಸಾಪ್ ನ ಕೆಲವು ಫೀಚರ್ ಗಳನ್ನು ಬದಲಾವಣೆ ಮಾಡುವುದರಿಂದ, ಈ ಫೀಚರ್ ಗಳಿಗೆ ಸ್ಮಾರ್ಟ್ ಫೋನ್ ಗಳಾದ ಬ್ಲ್ಯಾಕ್ ಬೆರಿ 10, ಬ್ಲ್ಯಾಕ್ ಬೆರಿ ಒ.ಎಸ್., ವಿಂಡೋಸ್ ಫೋನ್ 8.0 ಹಾಗು ಕೆಲವು ಹಳೆಯ ಸ್ಮಾರ್ಟ್ ಫೋನ್ ಗಳು ಸಪೋರ್ಟ್ ಮಾಡದ ಕಾರಣ ಈ ಫೋನ್ ಗಳಲ್ಲಿ ವಾಟ್ಸಾಪ್ ನ್ನು ಬಳಕೆ ಮಾಡಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಸ ವರ್ಷನ್ ಆದ ಒ.ಎಸ್ ಗೆ ಬದಲಾಯಿಸಿಕೊಳ್ಳಬೇಕು. ಅಂಡ್ರಾಯಿಡ್ ಒ.ಎಸ್.4.0+, ಐಫೋನ್ ಐ.ಒ.ಎಸ್ 7+, ವಿಂಡೋಸ್ ಫೋನ್8.1+ ಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ