ಟಾಪ್ ಗೇರ್‌ನಲ್ಲಿ ಮುನ್ನುಗ್ಗುತ್ತಿದ್ದ ದ್ವಿಚಕ್ರ ವಾಹನಗಳ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಕೇಂದ್ರ ಸರಕಾರದ ಅಧಿಕ ಮೌಲ್ಯದ ನೋಟು ನಿಷೇಧದಿಂದ ಕಳೆದ ಎರಡು ತಿಂಗಳಿಂದ ಮಾರಾಟದಲ್ಲಿ ಭಾರಿ ಇಳಿಮುಖವಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಮಾರಾಟ ಮೇಲೆ ಗಣನೀಯ ಪ್ರಭಾವ ಬೀರಿದೆ.
ಕಳೆದ ತಿಂಗಳು ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಅತಿದೊಡ್ಡ ಕಂಪನಿಗಳಾದ ಹೀರೋ ಮೋಟಾರ್ಸ್, ಬಜಾಜ್ ಆಟೋ, ಟಿವಿಎಸ್ ಮಾರಾಟದಲ್ಲಿ ಭಾರಿ ಹೊಡೆತ ಬಿದ್ದಿದೆ. ನವೆಂಬರ್ ತಿಂಗಳಲ್ಲೂ ಪರಿಸ್ಥಿತಿ ಆಶಾದಾಯಕವಾಗಿರಲಿಲ್ಲ. ಇನ್ನೂ ಮೂರು ನಾಲ್ಕು ತಿಂಗಳು ಕಳೆಯುವವರೆಗೂ ಪರಿಸ್ಥಿತಿ ಹೀಗೆ ಎನ್ನುತ್ತಿವೆ ಮೂಲಗಳು.
ಹೀರೋ ಮೋಟಾರ್ ಮಾರಾಟದಲ್ಲಿ ಶೇ.33.91ರಷ್ಟು ಕ್ಷೀಣಿಸಿ 3,30,202 ವಾಹನಗಳು ಮಾರಾಟವಾಗಿವೆ. ಬಜಾಜ್ ಮಾರಾಟದಲ್ಲೂ ಭಾರಿ ಹೊಡೆತ ಬಿದ್ದಿದೆ. ಡಿಸೆಂಬರ್‌ನಲ್ಲಿ ಕಂಪನಿ ಸೇಲ್ಸ್ ಶೇ.11ರಷ್ಟು ಕಡಿಮೆಯಾಗಿ 1,06,665 ವಾಹನಗಳು ಮಾರಾಟವಾಗಿವೆ. ಚೆನ್ನೈನ ಟಿವಿಎಸ್ ಮೋಟಾರ್ ಮಾರಾಟ ಶೇ.8.78ರಷ್ಟು ಕಡಿಮೆಯಾಗಿ 1,53,413 ವಾಹಗಳು ಮಾರಾಟವಾಗಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.