ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಟೆಲಿಕಾಂ ಸಂಪರ್ಕಕ್ಕೆ ಹೆಚ್ಚಾಗುತ್ತರುವ ಬೇಡಿಕೆ ಗಮನದಲ್ಲಿಟ್ಟುಕೊಂಡು ಟ್ರಾಯ್ ಈ ನಿರ್ಧಾರಕ್ಕೆ ಬಂದಿದೆ. ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಎರಡಕ್ಕೂ ಇದು ಅನ್ವಯವಾಗಲಿದೆ
ಜನರು ಒಂದಕ್ಕಿಂತ ಹೆಚ್ಚಿನ ಮೊಬೈಲ್ ನಂಬರ್ ಗಳನ್ನು ಹೊಂದುತ್ತಿದ್ದಾರೆ. ಇದರಿಂದ 2050 ರಲ್ಲಿ 185 ಕೋಟಿ ಮೊಬೈಲ್ ಸಂಖ್ಯೆಗಳ ಅವಶ್ಯಕತೆ ಎದುರಾಗಲಿದೆ ಎಂದು ಟ್ರಾಯ್ ಅಂದಾಜಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ 11 ಅಂಕೆಯ ಮೊಬೈಲ್ ಸಂಖ್ಯೆ ಅನಿವಾರ್ಯವೆಂದು ಟ್ರಾಯ್ ಹೇಳಿದೆ.