Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭೀಮ್ ಆಪ್ ಮೂಲಕ ರೂ.361 ಕೋಟಿ ವಹಿವಾಟು

ಭೀಮ್ ಆಪ್ ಮೂಲಕ ರೂ.361 ಕೋಟಿ ವಹಿವಾಟು
New Delhi , ಗುರುವಾರ, 9 ಫೆಬ್ರವರಿ 2017 (11:15 IST)
ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಭೀಮ್ ಆಪ್ ಮೂಲಕ ಇದುವರೆಗೆ ಸುಮಾರು ರೂ.361 ಕೋಟಿ ವಹಿವಾಟು ನಡೆದಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಬುಧವಾರ ಲೋಕಸಭೆಯಲ್ಲಿ ನಡೆದ ಪ್ರಶ್ನೋತ್ತರ ಸಮಯದಲ್ಲಿ ಕೇಂದ್ರ ಸಚಿವ ಇಂದ್ರಜಿತ್ ಸಿಂಗ್ ಈ ವಿಷಯವನ್ನು ತಿಳಿಸಿದರು.
 
ಡಿಜಿಟಲ್ ವಹಿವಾಟಿಗೆ ಜನ ಬೇರೆಬೇರೆ ಬ್ಯಾಂಕಿಂಗ್ ಅಪ್ಲಿಕೇಷನ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವೆಲ್ಲವನ್ನೂ ಒಂದೇ ವೇದಿಕೆಗೆ ತರಲು ಭೀಮ್ ಆಪ್‌ನ್ನು ಸರಕಾರ ಹೊರತಂದಿದೆ. ಇತರೆ ದೇಶಗಳು ಶೇ.90ರಷ್ಟು ಡಿಜಿಟಲ್ ವಹಿವಾಟು ಮಾಡುತ್ತಿದ್ದರೆ ಭಾರತ  ಕೇವಲ ಶೇ.3ರಷ್ಟು ಮಾತ್ರ ಡಿಜಿಟಲ್ ವಹಿವಾಟು ನಡೆಸುತ್ತಿದೆ.
 
ಅದು ಶೇ.22ರಷ್ಟು ಏರಿಕೆಯಾದಾಗ ಕಪ್ಪುಹಣವನ್ನು ಮಟ್ಟಹಾಕಲು ಸಹಾಯವಾಗುತ್ತದೆಂದು ಸಿಂಗ್ ಹೇಳಿದ್ದಾರೆ. ಭೀಮ್ ಆಪ್ ಆರಂಭಿಸಿದ ಕೆಲ ದಿನಗಳಲ್ಲೇ ಲಕ್ಷಾಂತರ ಮಂದಿ ಸ್ಮಾರ್ಟ್‌ಫೋನ್ ಬಳಕೆದಾರರು ಇದರ ಮೂಲಕ ವಹಿವಾಟು ನಡೆಸಿದ್ದಾರೆ ಎಂದು ಸಚಿವರು ವಿವರ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಜಿಟಲ್ ವಿಜೇತರು 7.6 ಲಕ್ಷ ಮಂದಿ