Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೊಸ ರಿಚಾರ್ಜ್ ನಿಯಮದಿಂದ ಗಗನಕ್ಕೇರಿದ ಟಿವಿ ರಿಚಾರ್ಜ್ ಬೆಲೆ: ಇನ್ನು ಹೊಸ ಪ್ಲ್ಯಾನ್ ಮಾಡ್ತಾರಂತೆ!

ಹೊಸ ರಿಚಾರ್ಜ್ ನಿಯಮದಿಂದ ಗಗನಕ್ಕೇರಿದ ಟಿವಿ ರಿಚಾರ್ಜ್ ಬೆಲೆ: ಇನ್ನು ಹೊಸ ಪ್ಲ್ಯಾನ್ ಮಾಡ್ತಾರಂತೆ!
ನವದೆಹಲಿ , ಬುಧವಾರ, 22 ಮೇ 2019 (08:27 IST)
ನವದೆಹಲಿ: ಗ್ರಾಹಕರ ಟಿವಿ ರಿಚಾರ್ಜ್ ಬೆಲೆ ಕಡಿಮೆಗೊಳಿಸಬೇಕು ಎಂಬ ಉದ್ದೇಶದೊಂದಿಗೆ ಟ್ರಾಯ್ ಜಾರಿಗೆ ತಂದ ಹೊಸ ರಿಚಾರ್ಜ್ ನಿಯಮ ಇದೀಗ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.


ನಾಲ್ಕು ಮನರಂಜನೆ ಚಾನೆಲ್ ಖರೀದಿಸುವಷ್ಟರಲ್ಲಿ 300 ರೂ. ಕ್ಕೂ ಹೆಚ್ಚು ಬೆಲೆ ತೆರಬೇಕಾದ ಪರಿಸ್ಥಿತಿ ಗ್ರಾಹಕನದ್ದು. ಜತೆಗೆ ಹೊಸ ರಿಚಾರ್ಜ್ ನಿಯಮದ ಬಗ್ಗೆ ಸಾಕಷ್ಟು ಕನ್ ಫ್ಯೂಷನ್. ಇದೆಲ್ಲದರ ನಡುವೆ ಗ್ರಾಹಕ ಹೊಸ ನಿಯಮಕ್ಕೆ ಹಿಡಿಶಾಪ ಹಾಕುವಂತಾಗಿದೆ. ಕೆಲವರಂತೂ ಟಿವಿಯೇ ಬೇಡವೆಂದು ಬಂದ್ ಮಾಡಿ ಕೂತವರೂ ಇದ್ದಾರೆ.

ಇದೆಲ್ಲಾ ಅಧ್ವಾನದ ನಂತರ ಇದೀಗ ಟ್ರಾಯ್ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಗ್ರಾಹಕರ ಜೇಬಿಗೆ ಕತ್ತರಿ ಬೀಳದಂತೆ ಚಾನೆಲ್ ಗಳ ಬೆಲೆ ಕಡಿತಗೊಳಿಸಲು ಹೊಸ ನಿಯಮ ರೂಪಿಸಲು ಟ್ರಾಯ್ ಮುಂದಾಗಿದೆ. ಆದರೆ ಇದು ಹೇಗೆ ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಸದ್ಯದಲ್ಲೇ ಗ್ರಾಹಕನಿಗೆ ಸುಲಭವಾಗುವ ಬೆಲೆ ರೂಪಿಸಲು ಯೋಜನೆ ಜಾರಿಗೊಳಿಸುವುದಾಗಿ ಹೇಳಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಗ್ರಾಮೀಣ ಲೋಕಸಭಾ ಚುನಾವಣೆ 2019ನೇರ ಪ್ರಸಾರ|Bangalore Rural Lok Sabha 2019 seat Live updates