ನವದೆಹಲಿ: ಟೊಮೆಟೊ ಬೆಲೆ ಇತ್ತೀಚೆಗೆ 100 ರೂ. ತಲುಪಿತ್ತು. ಆಗಲೇ ಗ್ರಾಹಕರು ತಲೆಮೇಲೆ ಕೈ ಹೊತ್ತು ಕೂತಿದ್ದರು. ಆದರೆ ಇಲ್ಲಿ ಈಗ ಟೊಮೆಟೋಗೆ ಕೆ.ಜಿ. ಗೆ 300 ರೂ. ಗೆ ಬೆಲೆ ಏರಿಕೆಯಾಗಿದೆ!
ಆದರೆ ಇದು ಭಾರತದಲ್ಲಿ ಅಲ್ಲ. ನೆರೆಯ ಪಾಕಿಸ್ತಾನದಲ್ಲಿ. ಸಾಂಪ್ರದಾಯಿಕ ಎದುರಾಳಿಗಳ ನಾಡಿನಲ್ಲಿ ಟೊಮೆಟೋಗೆ ಈಗ ಚಿನ್ನದ ಬೆಲೆಯಾಗಿದೆ.
ಹಾಗಿದ್ದರೂ ಭಾರತದಿಂದ ಟೊಮೆಟೋ ಆಮದು ಮಾಡಿಕೊಳ್ಳದಿರಲು ಪಾಕ್ ನಿರ್ಧರಿಸಿದೆ. ಉಭಯ ದೇಶಗಳ ನಡುವೆ ಸಂಬಂಧ ಹಳಸಿರುವ ಹಿನ್ನಲೆಯಲ್ಲಿ ಪಾಕ್ ಈ ನಿರ್ಧಾರಕ್ಕೆ ಬಂದಿದೆ. ಪಾಕಿಸ್ತಾನದ ದೇಶೀಯ ಮಾರುಕಟ್ಟೆಯಲ್ಲಿ ಈಗ ಟೊಮೆಟೋ ಕೊರತೆಯಿದೆ. ಪ್ರತೀ ಬಾರಿ ಭಾರತದಿಂದ ಆಮದು ಮಾಡಿಕೊಳ್ಳುವ ಪಾಕ್ ಈ ಬಾರಿ ಆ ರೀತಿ ಮಾಡಿಲ್ಲ. ಹಾಗಾಗಿ ಟೊಮೆಟೋ ಬೆಲೆ ಅಲ್ಲಿ ಗಗನಕ್ಕೇರಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ