ನವದೆಹಲಿ : ಮೊಬೈಲ್ ಫೋನ್ ಬಳಕೆದಾರರಿಗೆ ಅನಗತ್ಯ ಕರೆ ಹಾಗೂ ಮೆಸೇಜ್ ಗಳು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತಿದ್ದು, ಇದನ್ನು ತಪ್ಪಿಸಲು ಭಾರತದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಾದ ವೊಡಾಪೋನ್, ಏರ್ ಟೆಲ್ ಮತ್ತು ಜಿಯೋ ಕಂಪೆನಿಗಳು ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಜಾರಿಗೆ ತರಲಿದೆ.
ಅದರಂತೆ ವೊಡಾಫೋನ್- ಐಡಿಯಾ ಟಾನ್ಲಾ ಸೊಲ್ಯೂಷನ್ ಕಂಪನಿಯೊಂದಿಗೆ ಒಪ್ಪಿಗೆ ಮಾಡಿಕೊಂಡಿದೆ. ಹಾಗೇ ಜಿಯೋ ಕಂಪೆನಿ ಟೆಕ್ ಮಹೀಂದ್ರಾ ಜೊತೆ ಕೈ ಜೋಡಿಸಿ ನೂತನ ತಂತ್ರಜ್ಞಾನವನ್ನು ಅಳವಡಿಸಲು ಯೋಜನೆ ಹಾಕಿಕೊಂಡಿದೆ. ಏರ್ಟೆಲ್ ಕಂಪನಿ ಐಬಿಎಮ್ ಜೊತೆ ಸೇರಿಕೊಂಡಿದೆ.
ಈ ವ್ಯವಸ್ಥೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ನಿಯಮಾವಳಿಗೆ ಅನುಗುಣವಾಗಿ ಜಾರಿಯಾಗಲಿದ್ದು, ವೊಡಾಫೋನ್ ಮತ್ತು ಐಡಿಯಾ, ಜಿಯೋ ಹಾಗೂ ಏರ್ಟೆಲ್ ಬಳಕೆದಾರರಿಗೆ ಈ ಸೌಲಭ್ಯ ಲಭಿಸಲಿದೆ.