Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಿಪ್ ರಹಿತ ಎಟಿಎಂ ಕಾರ್ಡ್ ಬದಲಾಯಿಸದ ಗ್ರಾಹಕರಿಗೆ ಆರ್.ಬಿ.ಐ ನೀಡಿದೆ ಈ ಸೂಚನೆ

ಚಿಪ್ ರಹಿತ ಎಟಿಎಂ ಕಾರ್ಡ್ ಬದಲಾಯಿಸದ ಗ್ರಾಹಕರಿಗೆ ಆರ್.ಬಿ.ಐ ನೀಡಿದೆ ಈ ಸೂಚನೆ
ನವದೆಹಲಿ , ಮಂಗಳವಾರ, 8 ಜನವರಿ 2019 (07:04 IST)
ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಡೆಬಿಟ್ ಕಾರ್ಡ್ ನಲ್ಲಿ ಆಗುತ್ತಿರುವ ವಂಚನೆ ತಪ್ಪಿಸಲು ಚಿಪ್ ರಹಿತ ಎಟಿಎಂ ಕಾರ್ಡ್ ರದ್ದುಗೊಳಿಸಿ, ಇಎಂವಿ ಚಿಪ್ ಇರುವ ಕಾರ್ಡ್ ನ್ನು ಗ್ರಾಹಕರು ಪಡೆದುಕೊಳ್ಳುವಂತೆ ಘೋಷಣೆ ಮಾಡಿತ್ತು.  ಆದರೆ ಇದೀಗ  ಈ ನಿಯಮವನ್ನು ಸಡಿಲಗೊಳಿಸಿದೆ.

ಹೌದು. ಆರ್.ಬಿ.ಐ ಡಿಸೆಂಬರ್ 31, 2018ಕ್ಕೆ ಚಿಪ್ ರಹಿತ ಎಟಿಎಂ ಕಾರ್ಡ್ ರದ್ದುಗೊಳ್ಳಲಿರುವ ಕಾರಣ ಅಷ್ಟರೊಳಗೆ ಇಎಂವಿ ಚಿಪ್ ಇರುವ ಕಾರ್ಡ್ ನೀಡುವಂತೆ ಎಲ್ಲ ಬ್ಯಾಂಕ್ ಗಳಿಗೆ ಸೂಚಿಸಿತ್ತು. ಅದರಂತೆ ಶೇಕಡಾ 40 ರಷ್ಟು ಬ್ಯಾಂಕ್ ಗ್ರಾಹಕರು ಮಾತ್ರ ಕಾರ್ಡ್ ಬದಲಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಆದರೆ ಉಳಿದ ಗ್ರಾಹಕರ ಬಳಿ ಹಳೆ ಕಾರ್ಡ್ ಗಳೇ ಇರುವ ಕಾರಣ ಅವರಿಗೆ ವ್ಯವಹಾರದಲ್ಲಿ ತೊಂದರೆಯಾಗಬಹುದೆಂಬ ಉದ್ದೇಶದಿಂದ ಇದೀಗ ಆರ್.ಬಿ.ಐ. ತನ್ನ ನಿಯಮವನ್ನು ಸಡಿಲಗೊಳಿಸಿದೆ.

 

ಚಿಪ್ ಇಲ್ಲದ ಮ್ಯಾಜಿಸ್ಟ್ರಿಪ್ ಕಾರ್ಡ್ ಕೂಡ ಕೆಲಸ ಮಾಡಲಿದೆ. ಆದರೆ ಹಳೆ ಕಾರ್ಡ್ ಎಲ್ಲಿಯವರೆಗೆ ಕೆಲಸ ಮಾಡಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದ್ದರಿಂದ ಇಎಂವಿ ಚಿಪ್ ಕಾರ್ಡ್ ಬ್ಯಾಂಕ್ ನಲ್ಲಿಯೇ ಇದ್ದು, ಶಾಖೆಗೆ ಬಂದು ಹೊಸ ಕಾರ್ಡ್ ಪಡೆಯುವಂತೆ ಬ್ಯಾಂಕ್ ಗಳು ಗ್ರಾಹಕರಿಗೆ ಮನವಿ ಮಾಡುವಂತೆ ಆರ್.ಬಿ.ಐ ಸೂಚಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

12 ವರ್ಷದ ಬಾಲಕನ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿ ಜೈಲು ಸೇರಿದ ಪಕ್ಕದ ಮನೆ ಆಂಟಿ