ನವದೆಹಲಿ : ಏರ್ ಲೀಕ್, ಪಂಕ್ಚರ್ ಸಮಸ್ಯೆಗಳಿಂದ ಕಂಗೆಟ್ಟ ವಾಹನ ಸವಾರರಿಗೆ ಮಿಚೆಲಿನ್ ಮತ್ತು ಜನರಲ್ ಮೊಟಾರ್ಸ್ ಸಂಸ್ಥೆ ಸಿಹಿ ಸುದ್ದಿಯನ್ನು ನೀಡಿದ್ದು ಆ ಮೂಲಕ ಗಾಳಿ ರಹಿತ ಟಯರ್ ಗಳನ್ನು ಉತ್ಪಾದಿಸಲು ಮುಂದಾಗಿದೆ.
ಈಗಾಗಲೇ ರೆಡಿಯಲ್ ಟಯರ್, ಟ್ಯೂಬ್ ಲೆಸ್ ಟಯರ್, ಸ್ಟೀಲ್ ಬೆಲ್ಟೆಡ್ ಟಯರ್, ರನ್ ಫ್ಲಾಟ್ ಗಳಂತಹ ಹೊಸ ಬಗೆಯ ಟಯರ್ ಗಳನ್ನು ಕಂಡುಹಿಡಿಯಲಾಗಿದೆ. ಆದರೆ ಈ ಟಯರ್ ಗಳಿಗೆ ಗಾಳಿ ತುಂಬಿಸಲೇ ಬೇಕು. ಆದರೆ ಇದೀಗ ಮಿಚೆಲಿನ್ ಮತ್ತು ಜನರಲ್ ಮೊಟಾರ್ಸ್ ತಯಾರಿಸಿದ ಗಾಳಿ ರಹಿತ ಟಯರ್ ನ್ನು ಕಂಡುಹಿಡಿದಿದ್ದು, ಮುಂದಿನ ದಿನಗಳಲ್ಲಿ ಈ ಟಯರ್ ಚಾಲನೆಗೆ ಬರಲಿದೆ.
ಈ ಟಯರ್ ನಲ್ಲಿ ಮೆಟಲ್ ಅಲಾಯ್ ಮೀಲ್ಗಳನ್ನು ಅಳವಡಿಸಲಾಗಿದೆ. ಜೊತೆಗೆ ಕಾಂಪೋಸಿಟ್ ಸ್ಟೋಕ್ಸ್ಗಳನ್ನು ನೀಡಲಾಗಿದೆ. ಹಾಗೇ ಈ ಟಯರ್ಗೆ ಅಪ್ಟಿಸ್ ಎಂದು ಕೂಡ ಹೆಸರಿಡಲಾಗಿದೆ. ನೂತನ ಟಯರ್ಗಳು ಚೆವ್ರೊಲೆಟ್ ಬೋಲ್ಟ್ ಎಲೆಕ್ಟ್ರಿಕ್ ಕಾರುಗಳಿಗೆ ಅಳವಡಿಸಿ ಪರೀಕ್ಷಿಸಲಾಗುತ್ತಿದೆ. ಈ ಪರೀಕ್ಷೆ ಯಶಸ್ವಿಯಾದ ನಂತರ ಜಿಎಂ ಕಂಪೆನಿ ತನ್ನ ಕಾರುಗಳಿಗೆ ಇದನ್ನು ಅಳವಡಿಸಲಿದೆ ಎಂಬುದಾಗಿ ತಿಳಿದುಬಂದಿದೆ.