ಬೆಂಗಳೂರು : ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ದೇಶಾದ್ಯಂತ ತನ್ನ 51 ಶಾಖೆಗಳನ್ನು ಬಂದ್ ಮಾಡುವುದರ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ದೇಶದಾದ್ಯಂತ ಹೊಂದಿರುವ 1900 ಶಾಖೆಗಳ ಪೈಕಿ 51 ಶಾಖೆಗಳು ನಷ್ಟ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಈ ಶಾಖೆಗಳನ್ನು ಬಂದ್ ಮಾಡುವ ಮೂಲಕ ವೆಚ್ಚ ಕಡಿಮೆ ಮಾಡಬಹುದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಹಾಗೇ ಬಂದ್ ಮಾಡಲಾದ ಶಾಖೆಗಳಲ್ಲಿ ಗ್ರಾಹಕರು ಹೊಂದಿದ್ದ ಖಾತೆಗಳನ್ನು ಹತ್ತಿರದ ಮತ್ತೊಂದು ಶಾಖೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಗಳ ಐ.ಎಫ್.ಎಸ್.ಸಿ ಹಾಗೂ ಎಂಐಸಿಆರ್ ಕೋಡ್ ಗಳು ರದ್ದಾಗಿರುವುದರಿಂದ ತಮ್ಮ ಹಳೆ ಚೆಕ್ ಪುಸ್ತಕಗಳನ್ನು ಮರಳಿಸಿ ಹೊಸ ಚೆಕ್ ಪುಸ್ತಕ ಪಡೆಯಲು ಬ್ಯಾಂಕ್ ಗ್ರಾಹಕರಿಗೆ ಸೂಚಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.