ಜಗತ್ತಿನ ಅತಿದೊಡ್ಡ ಏರ್ ಕೂಲರ್ ಬ್ರ್ಯಾಂಡ್ ಸಿಂಫೋನಿ ಇತ್ತೀಚೆಗೆ ಗೃಹಬಳಕೆ ವಿಭಾಗದಲ್ಲಿ ಟಚ್ ರೇಂಜ್ ಶ್ರೇಣಿಯಲ್ಲಿ ಐದು ಕೂಲರ್ಗಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವುಗಳ ಸಾಮರ್ಥ್ಯ 20 ಲೀಟರ್ನಿಂದ 110 ಲೀಟರ್ಗಳ ನಡುವೆ ಇರುತ್ತದೆ ಎಂದು ಕಂಪೆನಿ ತಿಳಿಸಿದೆ.
ಇವುಗಳಲ್ಲಿ ಟಚ್ಸ್ಕ್ರೀನ್ ಪ್ಯಾನಲ್, ವಾಯ್ಸ್ ಅಸಿಸ್ಟ್, ಮಸ್ಕಿಟೋ ರಿಪಿಲೆಂಟ್ ಟೆಕ್ನಾಲಜಿ, ಸ್ವಚ್ಛವಾದ ಗಾಳಿಗಾಗಿ ಐ-ಪ್ಯೂರ್ ತಂತಜ್ಞಾನ, 4 ಸೈಡ್ ಕೂಲಿಂಗ್ ಪ್ಯಾಡ್ನಂತಹ ಹಲವು ವಿಶೇಷಗಳು ಇವೆ ಎಂದಿದೆ ಕಂಪೆನಿ.
ಹೊಸ ಉತ್ಪನ್ನಗಳ ಆವಿಷ್ಕಾರದಲ್ಲಿ ತಾವು ಯಾವತ್ತೂ ಮುಂದಿದ್ದೇನೆ ಎಂದು ಕಂಪೆನಿ ಮುಖ್ಯಸ್ಥ, ವ್ಯವಸ್ಥಾಪಕ ನಿರ್ದೇಶಕ ಅಚರ್ ಬಕೇರಿ ತಿಳಿಸಿದ್ದಾರೆ. ಭಾರತದಲ್ಲಿ ಗೃಹಬಳಕೆ ಏರ್ಕೂಲರ್ ಮಾರುಕಟ್ಟೆ ವಾರ್ಷಿಕ ಶೇ.15-20ರಷ್ಟು ಬೆಳವಣಿಗೆ ಹೊಂದುತ್ತಿದೆ ಎಂದು ಅಂದಾಜಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.