ದುಷ್ಕೃತ್ಯಗಳಿಗೆ ಮೊಬೈಲ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಮ್ ಕಾರ್ಡ್`ಗಳಿಗೆ ಆಧಾರ್ ಲಿಂಕ್ ಕೊಡುವ ನಿಯಮ ರೂಪಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.
ದೇಶಾದ್ಯಂತ 105 ಕೋಟಿ ಸಿಮ್ ಬಳಕೆಯಾಗುತ್ತಿದ್ದು, ವರ್ಷದೊಳಗೆ ಆಧಾರ್ ಲಿಂಕ್ ಮಾಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಇದರನ್ವಯ ನ್ಮುಂದೆ ಹೊಸ ಸಿಮ್ ಖರೀದಿಸುವಾಗ ಧಾರ್ ಕಡ್ಡಾಯವಾಗಲಿದೆ. ಜೊತೆಗೆ, ಪ್ರೀಪೇಯ್ಡ್ ಬಳಕೆದಾರರು ಕರೆನ್ಸಿ ಹಾಕಿಸಿಕೊಳ್ಳುವಾಗಲೂ ಆಧಾರ್ ನೀಡಬೇಕಾಗುತ್ತದೆ.
ರಾಷ್ಟ್ರ ವಿರೋಧಿ ಚಟುವಟಿಕೆಗೆ ಮೊಬೈಲ್ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಮೀತಿ ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ.