Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಶೇ. 24 ರ ಬೆಳವಣಿಗೆ

ರಾಜ್ಯ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಶೇ. 24 ರ ಬೆಳವಣಿಗೆ
Bangalore , ಗುರುವಾರ, 19 ಜನವರಿ 2017 (12:39 IST)
ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಆದಾಯವು 50 ಬಿಲಿಯನ್ ಯು.ಎಸ್. ಡಾಲರ್ ಗಳಿಷ್ಟಿದ್ದು ಶೇ. 24ರ ದರದಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ನಗರದ ವೈಟ್ ಫೀಲ್ಡ್ ನಲ್ಲಿ ನೆಟ್‍ಆಪ್ ಕಂಪನಿಯ ಬೆಂಗಳೂರು ಕ್ಯಾಂಪಸ್‍ನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
 
ಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಯ ರಾಜಧಾನಿಯೆಂದೇ ಹೆಸರಾಗಿರುವ ಕರ್ನಾಟಕವು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ವಲಯದಲ್ಲಿ ಅತ್ಯಂತ ಮುಂಚೂಣಿಯಲ್ಲಿ ಇರುವ ರಾಜ್ಯವಾಗಿ ಹೊರ ಹೊಮ್ಮಿದೆ. ಬೆಂಗಳೂರು ಜಾಗತಿಕ ತಂತ್ರಜ್ಞಾನ ಟೆಕ್-ಹಬ್ ಹಾಗೂ ಭಾರತದ ಸ್ಟಾರ್ಟ್‍ಅಪ್ ರಾಜಧಾನಿಯಾಗಿದೆ ಎಂದು ಅವರು ವಿವರಿಸಿದರು.
 
10ಲಕ್ಷ ಜನರಿಗೆ ಉದ್ಯೋಗ: ಬೆಂಗಳೂರು ನಗರದಲ್ಲಿ 400 ಕ್ಕೂ ಹೆಚ್ಚು ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು, 3500 ಕಂಪನಿಗಳು ಮತ್ತು 750 ಬಹುರಾಷ್ಟ್ರೀಯ ಕಂಪನಿಗಳು 10 ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಒದಗಿಸಿದೆ.
 
ಕರ್ನಾಟಕದ ಕೈಗಾರಿಕಾ ಉತ್ಪಾದನೆಯು 61.5 ಬಿಲಿಯನ್ ಯು.ಎಸ್. ಡಾಲರ್ ಗಳಾಗಿದ್ದು ಕಳೆದ 5 ವರ್ಷಗಳಲ್ಲಿ 20 ಬಿಲಿಯನ್ ಯು.ಎಸ್. ಡಾಲರ್ ಗಳಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ. ಇದರಲ್ಲಿ ಬಹುಪಾಲು ರಫ್ತು ತಂತ್ರಜ್ಞಾನ ವಲಯದಲ್ಲಿ ಆಗುತ್ತಿದೆ ಎಂದು ಮುಖ್ಯಮಂತ್ರಿ ಅವರು ವಿವರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕರುಳ ಬಳ್ಳಿಯನ್ನೇ ಬೆಂಕಿಗೆ ಎಸೆದ ಪಾಪಿ ತಾಯಿ!