ನವದೆಹಲಿ : ದಿಲ್ಲಿ ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ (ಎಸ್.ಎಲ್.ಬಿಸಿ) ಎಟಿಎಂನಿಂದ ಎರಡು ಬಾರಿ ಹಣ ತೆಗೆಯಲು 6 ರಿಂದ 12ಗಂಟೆಗಳ ಕಾಲಮಿತಿ ನಿಗದಿಪಡಿಸುವಂತೆ ಬ್ಯಾಂಕುಗಳಿಗೆ ಶಿಫಾರಸ್ಸು ಮಾಡಿದೆ.
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಎಟಿಎಂ ಪ್ರಕರಣಗಳು ಹೆಚ್ಚಾಗುತ್ತಿದ್ದು, 2018-19ರ ಅವಧಿಯಲ್ಲಿ ದೆಹಲಿಯಲ್ಲೇ 179 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಎಟಿಎಂಗಳಲ್ಲಿನ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ದಿಲ್ಲಿ ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ(ಎಸ್.ಎಲ್.ಬಿಸಿ) ಈ ಹೊಸ ಕ್ರಮ ಕೈಗೊಳ್ಳಲು ಬ್ಯಾಂಕುಗಳಿಗೆ ಸೂಚಿಸಿದೆ.
ಒಂದು ಬಾರಿ ಎಟಿಎಂನಿಂದ ನಗದು ವಿತ್ಡ್ರಾ ಮಾಡಿದ ಬಳಿಕ ಮತ್ತೊಮ್ಮೆ ಹಣ ತೆಗೆಯಲು 6 ರಿಂದ 12 ಗಂಟೆಗಳ ಅಂತರ ಇಡಲಾಗುತ್ತದೆ. ಎಟಿಎಂಗಳಲ್ಲಿ ಬಹುತೇಕ ವಂಚನೆಗಳು ಪ್ರಕರಣಗಳು ರಾತ್ರಿ ಮತ್ತು ಮಧ್ಯರಾತ್ತಿ ವೇಳೆ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಈ ರೀತಿಯ ನಿಯಮದ ಅವಶ್ಯಕತೆ ಇದೆ. ಹೀಗಾಗಿ ನಗದು ವಿತ್ ಡ್ರಾ ಕಾಲಮಿತಿ ಜಾರಿಗೆಗೊಳಿಸುವ ಪ್ರಸ್ತಾವನೆ ಮುಂದಿಡಲಾಗಿದೆ ಎಂದು ಎಸ್.ಎಲ್.ಬಿಸಿ ತಿಳಿಸಿದೆ.