ಈ ಹಿಂದೆಯೇ ಘೋಷಿಸಿದಂತೆ ದೇಶದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಸ್`ಬಿಐ ಸೇವಾ ಶುಲ್ಕವನ್ನ ಬದಲಿಸಲಾಗಿದ್ದು, ನಗದು ಮತ್ತು ಆನ್`ಲೈನ್ ವಹಿವಾಟು ಸೇವಾ ಶುಲ್ಕಗಳು ಇಂದಿನಿಂದ ಜಾರಿಗೆ ಬಂದಿದೆ.
- ಮೊಬೈಲ್ ವ್ಯಾಲೆಟ್ ಆಪ್ ಮೂಲಕ ಕಾರ್ಡ್ ಲೆಸ್ ಎಟಿಎಂ ವಿತ್ ಡ್ರಾ ಮಾಡುವವರಿಗೆ ಪ್ರತೀ ವಿತ್ ಡ್ರಾಗೆ 25 ರೂ. ಶುಲ್ಕ ವಿಧಿಸಲಾಗುತ್ತೆ.
- ಶೂನ್ಯ ಡೆಪಾಸಿಟ್ ಉಳಿತಾಯ ಖಾತೆದಾರರಿಗೆ ನೀಡುವ ಎಟಿಎಂ ಕಾರ್ಡ್, ವಾರ್ಷಿಕ ಸ್ಟೇಟ್ ಮೆಂಟ್, ಚೆಕ್ ಬುಕ್`ಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
- ಸಾಮಾನ್ಯ ಉಳಿತಾಯ ಖಾತೆದಾರರಿಗೆ ತಿಂಗಳಿಗೆ ಮಹಾನಗರಗಳಲ್ಲಿ 8 ಉಚಿತ(ಎಸ್`ಬಿಎಂ ಎಟಿಎಂಗಳಲ್ಲಿ 5 ಮತ್ತು ಇತರೆ ಬ್ಯಾಂಕ್ ಎಟಿಎಂಗಳಲ್ಲಿ 3) ಎಟಿಎಂ ವಿತ್ ಡ್ರಾ ಸೌಲಭ್ಯವಿದೆ.
- ಇತರೆ ನಗರಗಳಲ್ಲಿ 10 ಎಟಿಎಂ ವಿತ್ ಡ್ರಾ(ಎಸ್`ಬಿಎಂ ಎಟಿಎಂಗಳಲ್ಲಿ 5 ಮತ್ತು ಇತರೆ ಬ್ಯಾಂಕ್ ಎಟಿಎಂಗಳಲ್ಲಿ 5) ಉಚಿತವಾಗಿ ಸಿಗಲಿದೆ.
- ಐಎಂಪಿಎಸ್ ಮೂಲಕ ಆನ್`ಲೈನ್ ಹಣ ವರ್ಗಾವಣೆಗೆ 1 ಲಕ್ಷದವರೆಗೆ 5 ರೂ. ಶುಲ್ಕ ಮತ್ತು ಸೇವಾ ಶುಲ್ಕ ಪಾವತಿಸಬೇಕಿದೆ. 1 ಲಕ್ಷದಿಂದ 2 ಲಕ್ಷದವರೆಗಿನ ವರ್ಗಾವಣೆಗೆ 15 ರೂ. ಮತ್ತು 2 ಲಕ್ಷದಿಂದ 5 ಲಕ್ಷ ರೂ.ವರೆಗಿನ ವರ್ಗಾವಣೆಗೆ 25 ರೂ. ಶುಲ್ಕ ಮತ್ತು ಸೇವಾ ತೆರಿಗೆ ಪಾವತಿಸಬೇಕಿದೆ.
- 10 ಎಲೆಯ ಚೆಕ್ ಬುಕ್`ಗೆ 30 ರೂ. ಶುಲ್ಕ ಮತ್ತು ಸೇವಾ ಶುಲ್ಕ ಪಾವತಿಸಬೇಕು
- 25 ಎಲೆಯ ಚೆಕ್ ಬುಕ್`ಗೆ 75 ರೂ. ಶುಲ್ಕ ಮತ್ತು ಸೇವಾ ತೆರಿಗೆ ಪಾವತಿಸಬೇಕು.
- 50 ಎಲೆಯ ಚೆಕ್ ಬುಕ್`ಗೆ 150 ರೂ. ಶುಲ್ಕ ಮತ್ತು ಸೇವಾ ತೆರಿಗೆ ಪಾವತಿಸಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ