ಹೂಡಿಕೆದಾರರು ಮತ್ತು ಬ್ಯಾಂಕ್‌ಗಳು ಡಾಲರ್ ಮಾರಾಟದಲ್ಲಿ ತೊಡಗಿದ್ದರಿಂದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 4 ಪೈಸೆ ಚೇತರಿಕೆಯಾಗಿದೆ.
ದೇಶಿಯ ಶೇರುಪೇಟೆ ಚೇತರಿಕೆ ಕಂಡಿದ್ದರೂ ಹೂಡಿಕೆದಾರರು ಡಾಲರ್ ಮಾರಾಟದಲ್ಲಿ ತೊಡಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆಯಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಅಮೆರಿಕದ ಕರೆನ್ಸಿ ಮಾರಾಟಕ್ಕೆ ಹೂಡಿಕೆದಾರರು ಮತ್ತು ಬ್ಯಾಂಕ್‌ಗಳು ಆಸಕ್ತಿ ತೋರಿದ್ದರಿಂದ ಡಾಲರ್ ವಹಿವಾಟಿನಲ್ಲಿ ಕುಸಿತವಾಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 31 ಪೈಸೆ ಕುಸಿತ ಕಂಡು 68.13 ಪಾಯಿಂಟ್‌ಗಳ ಕುಸಿತ ಕಂಡಿತ್ತು.
ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 120.02 ಪಾಯಿಂಟ್‌ಗಳ ಏರಿಕೆ ಕಂಡು 26,270.26 ಅಂಕಗಳಿಗೆ ತಲುಪಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ