ನವದೆಹಲಿ : ಟೆಲಿಕಾಂ ಕಂಪೆನಿಗಳಿಗೆ ಟಕ್ಕರ ನೀಡುತ್ತಿದ್ದ ಮುಖೇಶ್ ಅಂಬಾನಿಯ ರಿಲಾಯನ್ಸ್ ಕಂಪೆನಿ ಇದೀಗ ಇ ಕಾಮರ್ಸ್ ಕಂಪೆನಿಗಳ ಜೊತೆ ಸ್ಪರ್ಧೆಗಿಳಿಯಲು ಮುಂದಾಗಿದೆ.
ಅಮೆಜಾನ್, ವಾಲ್ಮಾರ್ಟ್, ಫ್ಲಿಪ್ ಕಾರ್ಟ್ ಕಂಪೆನಿಗಳಂತೆ ಆಲ್ ಲೈನ್ ಮೂಲಕ ಜನರಿಗೆ ಸೇವೆಗಳನ್ನು ನೀಡಲು ಮುಂದಾಗಿದೆ. ಅದಕ್ಕಾಗಿ ರಿಲಾಯನ್ಸ್ ಇಂಡಸ್ಟ್ರೀಸ್ ಚೇರ್ ಪರ್ಸನ್ ಮುಖೇಶ್ ಅಂಬಾನಿ 1.08ಲಕ್ಷ ಕೋಟಿ ಹಣ ಖರ್ಚು ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಮೂಲಕ ಅವರು ಅಮೆಜಾನ್, ವಾಲ್ಮಾರ್ಟ್, ಫ್ಲಿಪ್ ಕಾರ್ಟ್ ಗಳಂತಹ ಇ-ಕಾಮರ್ಸ್ ಕಂಪೆನಿಗಳ ನಿದ್ದೆಗೆಡಿಸಲು ರಿಲಾಯನ್ಸ್ ಕಂಪೆನಿ ಮುಂದಾಗಿದೆ ಎನ್ನಲಾಗಿದೆ.